

ಬೆಂಗಳೂರು: ಸೌರವ್ ಗಂಗೂಲಿ, ಭಾರತ ತಂಡದ ಸರ್ವಶ್ರೇಷ್ಠ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. 2000ದಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಿಂದ ತತ್ತರಿಸಿದ್ದ ಭಾರತ ತಂಡದ ಪಾಲಿಗೆ ಆಪತ್ಭಾಂದವರಾದವರು ಗಂಗೂಲಿ. ಬುಧವಾರವಷ್ಟೇ 48ನೇ ವರ್ಷಕ್ಕೆ ಕಾಲಿಟ್ಟ ಸೌರವ್ ಗಂಗೂಲಿ, ಟೀಮ್ ಇಂಡಿಯಾ ನಾಯಕರಾಗಿದ್ದ ವೇಳೆ ತೆಗೆದುಕೊಂಡ ಕೆಲವು ಕಠಿಣ ಕ್ರಮಗಳಿಂದ ಗಮನಸೆಳೆದಿದ್ದರು. ಜತೆಗೆ ಹಲವು ಯುವ ಪ್ರತಿಭೆಗಳ ಅನಾವರಣದಕ್ಕೂ ದಾದಾ ಅವರೇ ಕಾರಣರಾಗಿದ್ದರು. ನಾಯಕನಾಗಿದ್ದ ಗಂಗೂಲಿ ತೆಗೆದುಕೊಂಡು ಯಶಸ್ವಿಯಾದ 5 ಕಠಿಣ ಕ್ರಮಗಳ ವಿವರ ಇಲ್ಲಿದೆ.
1. ಲಕ್ಷ್ಮಣ್ಗೆ 3ನೇ ಕ್ರಮಾಂಕ: 2001ರಲ್ಲಿ ಕೋಲ್ಕತದಲ್ಲಿ ನಡೆದ ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿದ್ದು ದಾದಾ ತೆಗೆದುಕೊಂಡ ಮೊದಲ ಕಠಿಣ ಕ್ರಮ. ಅಂದಿನ ಪಂದ್ಯದಲ್ಲಿ ರಾಹುಲ್ ಬದಲಿಗೆ ಲಕ್ಷ್ಮಣ್ ಬ್ಯಾಟಿಂಗ್ಗಿಳಿದು ದಿನವೀಡಿ ಬ್ಯಾಟಿಂಗ್ ಮಾಡಿ 281 ರನ್ ಸಿಡಿಸಿದ್ದರು. 5ನೇ ದಿನದಾಟದಲ್ಲಿ ಹರ್ಭಜನ್ ಮ್ಯಾಜಿಕ್ನಿಂದ ಭಾರತ ಗೆಲುವು ದಾಖಲಿಸಿತ್ತು.
2. ಆರಂಭಿಕನಾಗಿ ಸೆಹ್ವಾಗ್ ಬಡ್ತಿ: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೀರೇಂದ್ರ ಸೆಹ್ವಾಗ್ಗೆ ಆರಂಭಿಕನಾಗಿ ಬಡ್ತಿ ನೀಡಿದ್ದು ದಾದಾ ತೆಗೆದುಕೊಂಡ ಮತ್ತೊಂದು ದಿಟ್ಟ ಕ್ರಮ. 6ನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸೆಹ್ವಾಗ್ ಆಕ್ರಮಣಕಾರಿ ವೈಖರಿ ಗಮನಿಸಿದ ದಾದಾ, ಆರಂಭಿಕನಾಗಿ ಇಳಿಸಿ ಯಶಸ್ವಿಯಾದರು.
3. ದ್ರಾವಿಡ್ಗೆ ವಿಕೆಟ್ ಕೀಪಿಂಗ್ ಹೊಣೆ: ಧೋನಿ ಟೀಮ್ ಇಂಡಿಯಾಗೆ ಎಂಟ್ರಿಕೊಡುವುದಕ್ಕೂ ಮುಂಚೆ ತಜ್ಞ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ತಲಾಶ್ನಲ್ಲಿದ್ದ ದಾದಾ, ರಾಹುಲ್ ದ್ರಾವಿಡ್ಗೆ ಆ ಜವಾಬ್ದಾರಿ ನೀಡಿದರು. ಇದರೊಂದಿಗೆ ಹೆಚ್ಚುವರಿ ಬ್ಯಾಟ್ಸ್ಮನ್ ತಂಡಕ್ಕೆ ಲಭಿಸುವಂತೆ ಮಾಡಿದರು. 2002 ರಿಂದ 2004ರವರೆಗೆ ದ್ರಾವಿಡ್ ಹೆಚ್ಚಾಗಿ ಈ ಹುದ್ದೆ ನಿಭಾಯಿಸಿದರು.
4. ಧೋನಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್: 2005ರಲ್ಲಿ ಕೀನ್ಯಾದಲ್ಲಿ ಭಾರತ ಎ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಧೋನಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಿದರು. ರಾಷ್ಟ್ರೀಯ ತಂಡದಲ್ಲಿ ಆರಂಭಿಕ ಹಂತದಲ್ಲಿ ಧೋನಿ ಮಧ್ಯಮ ಕ್ರಮಾಂಕದಲ್ಲಿ ವಿಲರಾದರು. ಬಳಿಕ ಪಾಕಿಸ್ತಾನ ಎದುರು 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿ ಯಶ ಕಂಡರು. ಇದರೊಂದಿಗೆ ಸೂಕ್ತ ವಿಕೆಟ್ ಕೀಪರ್-ಸ್ಫೋಟಕ ಬ್ಯಾಟ್ಸ್ಮನ್ ತಂಡಕ್ಕೆ ದಕ್ಕುವಂತೆ ಮಾಡಿದರು.
5. ಯುವಕರಿಗೆ ಅವಕಾಶ: 2000ರ ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ತತ್ತರಿಸಿದ್ದ ಟೀಮ್ ಇಂಡಿಯಾದಲ್ಲಿ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಆದ್ಯತೆ ನೀಡಿದರು. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಧೋನಿಯಂಥ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದು ದಾದಾ..
ಹಾಲಿ ಬಿಸಿಸಿಐ ಅಧ್ಯರೂ ಆಗಿರುವ ಗಂಗೂಲಿ, ಆಡಳಿತದಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಸಚಿನ್ ಜತೆ ಇನಿಂಗ್ಸ್ ಆರಂಭಿಸುತ್ತಿದ್ದ ಗಂಗೂಲಿ, 22 ಶತಕಗೊಂದಿಗೆ 11363 ರನ್ ಸಿಡಿಸಿದ್ದಾರೆ. ಗಂಗೂಲಿ ಸಾರಥ್ಯದಲ್ಲಿ ಭಾರತ 2001ರಲ್ಲಿ ಮೊದಲ ಭಾರತ ಆಸ್ಟ್ರೆಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದರೆ, 2002ರಲ್ಲಿ ಇಂಗ್ಲೆಂಡ್ನಲ್ಲಿ ನ್ಯಾಟ್ ವೆಸ್ಟ್ ಸರಣಿ ಗೆದ್ದಿತ್ತು. 2003ರಲ್ಲಿ ಏಕದಿನ ವಿಶ್ವಕಪ್ನಲ್ಲಿ ೈನಲ್ಗೇರಿದ್ದರೆ, 2004ರಲ್ಲಿ ಪಾಕಿಸ್ತಾನ ಎದುರು ಟೆಸ್ಟ್ ಸರಣಿ ಗೆದ್ದುಕೊಂಡಿತ್ತು.