ಅಮಿತಾಭ್​ ಬಚ್ಚನ್​ ಆರೋಗ್ಯ ಸುಧಾರಣೆಗೆ ಕ್ರೀಡಾವಲಯ ಹಾರೈಕೆ

amithab bhachachn for web.jpg final copy
Published on

ನವದೆಹಲಿ: ಬಾಲಿವುಡ್​ ದಿಗ್ಗಜ ಅಮಿತಾಭ್​ ಬಚ್ಚನ್​ ಆರೋಗ್ಯ ಸುಧಾರಣೆಗೆ ಕ್ರೀಡಾ ವಲಯದ ದಿಗ್ಗಜರು ಶುಭ ಹಾರೈಸಿದ್ದಾರೆ. ಕೋವಿಡ್​&19ರ ಸೋಂಕಿಗೆ ಒಳಗಾಗಿರುವ ಅಮಿತಾಭ್​ ಬಚ್ಚನ್​ ಹಾಗೂ ಅವರ ಪುತ್ರ ಅಭಿಷೇಕ್​ ಬಚ್ಚನ್​ ಶನಿವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೊನಾ ವೈರಸ್​ ಸೋಂಕು ತಲುಗಿದೆ ಎಂದು ಸ್ವತಃ ಅಮಿತಾಭ್​ ಬಚ್ಚನ್​ ಶನಿವಾರ ಟ್ವಿಟರ್​ ಮೂಲಕ ಖಾತ್ರಿಪಡಿಸಿದ್ದರು. ದಿಗ್ಗಜ ಬ್ಯಾಟ್ಸ್​ಮನ್​ ಸಚಿನ್​ ತೆಂಡುಲ್ಕರ್​, ಸ್ಪಿನ್ನರ್​ ಹರ್ಭಜನ್​ ಸಿಂಗ್​, ಐಪಿಎಲ್​ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ ವತಿಯಿಂದ ಟ್ವೀಟ್​ ಮೂಲಕ ಬಿಗ್​ ಬಿ ಆರೋಗ್ಯ ಸುಧಾರಣೆಗೆ ಶುಭಕೋರಲಾಗಿದೆ. ಅಲ್ಲದೆ, ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್​ ಕೂಡ ಬಿಗಿ ಚೇತರಿಕೆಗೆ ಹಾರೈಸಿದ್ದಾರೆ.

ಟೇಕ್​ ಕೇರ್​ ಅಮಿತ್​ಜೀ. ಆದಷ್ಟು ಬೇಗ ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ಸಚಿನ್​ ತೆಂಡುಲ್ಕರ್​ ಶುಭಕೋರಿದ್ದಾರೆ. ಅನುಭವಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಗೆಟ್​ ವೆಲ್​ ಸೂನ್​ ಸರ್​ ಎಂದು ಟ್ವೀಟ್​ ಮಾಡಿದ್ದರೆ, ಮಾಜಿ ವೇಗದ ಬೌಲರ್​ ಆರ್​ಪಿ ಸಿಂಗ್​, ಅಮಿತಾಮ್​, ಅಭಿಷೇಕ್​ ಬಚ್ಚನ್​, ಚೇತನ್​ ಚೌಹಾನ್​ ಅವರುಗಳ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ಹೇಳಿದ್ದಾರೆ. ಯುವ ಅಥ್ಲೀಟ್​ ಹಿಮಾ ದಾಸ್​, ಕ್ರಿಕೆಟಿಗ ಮೊಹಮದ್​ ಶಮಿ, ಐಪಿಎಲ್​ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ ಸೇರಿದಂತೆ ಹಲವು ಮಂದಿ ಬಿಗ್​ ಬಿ ಹಾಗೂ ಅಭಿಷೇಕ್​ ಚೇತರಿಕೆಗೆ ಶುಭಕೋರಿದ್ದಾರೆ.

ನನಗೆ ಕೋವಿಡ್​-19 ಪಾಸಿಟಿವ್​ ಖಾತ್ರಿಯಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ, ಕುಟುಂಬದ ಇತರ ಸದಸ್ಯರು ಪರೀಕ್ಷೆಗೆ ಒಳಗಾಗಿದ್ದಾರೆ ಎಂದು 77 ವರ್ಷದ ಬಿಗ್​ ಬಿ ಟ್ವೀಟ್​ ಮಾಡಿದ್ದರು. ಇವರಲ್ಲಿ ಅಭಿಷೇಕ್​ ಬಚ್ಚನ್​ ವರದಿ ಕೂಡ ಪಾಸಿಟಿವ್​ ಬಂದಿದ್ದು, ಬಿಗ್​ ಬಿ ಪತ್ನಿ ಜಯಾ ಬಚ್ಚನ್​, ಅಭಿಷೇಕ್​ ಪತ್ನಿ ಐಶ್ಚರ್ಯ ರೈ ಬಚ್ಚನ್​ ವರದಿ ನೆಗೆಟಿವ್​ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net