More

  Vote ನಮ್ಮ Power ಮೂಲಕ ಮತದಾನದ ಮಹತ್ವ ಸಾರಿದ ಚಂದನವನದ ತಾರೆಯರು

  ಬೆಂಗಳೂರ: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಮತಬೇಟೆಯಲ್ಲಿ ನಿರತರಾಗಿದ್ದಾರೆ. ಚುನಾವಣೆಗಳಲ್ಲಿ ಮತಪ್ರಮಾಣವನ್ನು ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದೀಗ ಇದಕ್ಕೆ ಪೂರಕವೆಂಬಂತೆ ಮಾಧ್ಯಮ ಅನೇಕ ಸಂಸ್ಥೆ Vote ನಮ್ಮ Power ಎಂಬ ರ್‍ಯಾಪ್​ ಸಾಂಗ್​ ಒಂದನ್ನು ಹೊರತಂದಿದೆ.

  ಯುವಜನತೆ ಹೆಚ್ಚಾಗಿ ಮತದಾನ ಮಾಡಬೇಕೆಂಬ ಉದ್ಧೇಶದಿಂದ ಈ ಹಾಡನ್ನು ಮಾಡಲಾಗಿದ್ದು, ಇದಕ್ಕೆ ಬಿಗಬಾಸ್​ ಸೀಸನ್​-9ರ ರನ್ನರ್​ ಅಪ್​ ನಟ ರಾಕೇಶ್​ ಅಡಿಗ ಹಾಗೂ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್​ ಧ್ವನಿಯಾಗಿದ್ದಾರೆ. ಅನು ಮೋತಿ ಸಾಹಿತ್ಯವಿರುವ ಈ ಹಾಡಿಗೆ ಕಾರ್ತಿಕ್​ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

  ಈ ಕುರಿತು ಮಾತನಾಡಿರುವ ನಿರ್ದೇಶಕ ರಾಜ್​ ಗೋಪಿ, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಂವಿಧಾನದಲ್ಲಿರುವ ಕೆಲವು ಅಂಶಗಳನ್ನು ಒಟ್ಟುಕೊಂಡು ಈ ಹಾಡನ್ನು ಮಾಡಿದ್ದೇವೆ. ಈಗಿನ ಯುವ ಜನತೆ ಹೆಚ್ಚಾಗಿ ರ್‍ಯಾಪ್​ ಸಾಂಗ್​ ಇಷ್ಟಪಡುವುದರಿಂದ ಈ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಬಿಜೆಪಿಯಿಂದ ಮಾಜಿ ಸಚಿವ ಈಶ್ವರಪ್ಪ ಉಚ್ಚಾಟನೆ; ವಿಜಯೇಂದ್ರ, ಯಡಿಯೂರಪ್ಪ ಹೇಳಿದ್ದಿಷ್ಟು

  ಈ ಕುರಿತು ಮಾತನಾಡಿರುವ ಮತದಾನ ಜಾಗೃತಿ ರಾಯಭಾರಿ, ಬಿಗ್​ ಬಾಸ್​ ಸೀಸನ್​-10ರ ಸ್ಪರ್ಧಿ ನೀತು ವನಜಾಕ್ಷಿ, ಮತದಾನದ ದಿನ‌ ರಜೆ ಇದೆ ಎಂದು ಮನೆಯಲ್ಲಿ ಕೂರುವುದು. ಪ್ರವಾಸಕ್ಕೆ ಹೋಗುವುದು ಮಾಡಬೇಡಿ. ಎಲ್ಲರೂ ಮತದಾನ ಮಾಡಿ.‌ ಏಕೆಂದರೆ ಅದು ನಮ್ಮ ಹಕ್ಕಲ್ಲ.‌ ಅಧಿಕಾರ ಎಂದು ನೀತು ವನಜಾಕ್ಷಿ ಅಭಿಪ್ರಾಯಪಟ್ಟಿದ್ದಾರೆ.

  Vote My Power ಹಾಡಿನಲ್ಲಿ ಖ್ಯಾತ ತಾರೆಯರಾದ . ನವೀನ್‌ ಶಂಕರ್‌, ನೀತೂ ವನಜಾಕ್ಷಿ, ಕಾರ್ತೀಕ್‌ ಮಹೇಶ್‌, ತನಿಶಾ ಕುಪ್ಪಂಡ, ಸಾನಿಯಾ ಅಯ್ಯರ್‌, ಸಾಗರ್‌ ಪುರಾಣಿಕ್‌, ನಿರಂಜನ್‌ ದೇಶಪಾಂಡೆ, ಚಂದನಾ ಅನಂತಕೃಷ್ಣ, ತೇಜಸ್ವಿನಿ ಶರ್ಮ, smile guru ರಕ್ಷಿತ್‌, ಬೃಂದಾ ಪ್ರಭಾಕರ್‌, ಅಭಯ್‌ ಮತ್ತು ಅನನ್ಯ ಅಮರ್‌ ಸೇರಿದಂತೆ ಮುಂತಾದವರು ಹೆಜ್ಜೆ ಹಾಕಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts