More

    ಹೆಂಡತಿ ಮನೆಯವರ ನಡೆಗೆ ಮುನಿಸಿಕೊಂಡು ಪ್ರಾಣಬಿಟ್ಟ ವ್ಯಕ್ತಿ; ಪೊಲೀಸ್​ ತನಿಖೆಯಲ್ಲಿ ಬಯಲಾಯ್ತು ಅಸಲಿ ಸಂಗತಿ

    ಲಖನೌ: ನಮ್ಮ ಮನೆಗಳಲ್ಲಿ ಶುಭ ಸಮಾರಂಭ ನಡೆದರೆ ಎಲ್ಲವೂ ಸುಸೂತ್ರವಾಗಿ ನೆರವೇರಬೇಕೆಂದು ಬಯಸುತ್ತೇವೆ. ಅದರಂತೆ ಬಂಧು-ಬಳಗ, ಸ್ನೇಹಿತರನ್ನು ಆಹ್ವಾನಿಸುತ್ತೇವೆ. ನಮ್ಮ ಮನೆಗಳಲ್ಲಿ ಶುಭ ಸಮಾರಂಭ ನಡೆದಾಗನ ಗಡಿಬಿಡಿಯಲ್ಲಿ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮ ಇದು ನಡೆದರೂ ಅದು ಹಲವು ತಪ್ಪು ತಿಳುವಳಿಕೆಗೆ ಆಸ್ಪದ ಮಾಡಿಕೊಡುತ್ತದೆ. ಇದೀಗ ಇದಕ್ಕೆ ಪೂರಕವೆಂಬಂತೆ ಘಟನೆಯೊಂದು ನಡೆದಿದ್ದು, ನಾದಿನಿಯ ಮದುವೆಗೆ ತನ್ನನ್ನು ಆಹ್ವಾನಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಹರ್ದೋಯಿ ಜಿಲ್ಲೆಯ ಕಾಸಿಂಪುರ ನಿವಾಸಿ ಅನಿಲ್​ ವರ್ಮಾ (47) ಎಂದು ಗುರುತಿಸಲಾಗಿದ್ದು, ಇವರು ನಿವೃತ್ತ ಯೋಧ ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    Marriage

    ಇದನ್ನೂ ಓದಿ: ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ

    ಈ ಕುರಿತು ಪ್ರತಿಕ್ರಿಯಿಸಿರುವ ಹರ್ದೋಯಿ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಗುರುವಾರದಂದು (ಏಪ್ರಿಲ್ 18) ಅನಿಲ್​ ಪತ್ನಿ ವಿನಿತಾ ತಮ್ಮ ಮಕ್ಕಳಾದ ಅನಿಕೇಶ್​ ಹಾಗೂ ಆರ್ಯನ್​ ಜೊತೆಗೆ ಮದುವೆ ಕಾರ್ಯದ ನಿಮಿತ್ತ ತವರು ಮನೆಗೆ ತೆರಳಿದ್ದರು. ತನ್ನನ್ನು ಆಹ್ವಾನಿಸದೆ ಇರುವುದರಿಂದ ಕುಪಿತಗೊಂಡಿದ್ದ ಅನಿಲ್​ ಶನಿವಾರ (ಏಪ್ರಿಲ್ 20) ದಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಗೆ ಪತ್ನಿ ಅನೇಕ ಬಾರಿ ಕರೆ ಮಾಡಿದರೂ ಆತ ಸ್ವೀಕರಿಸಿರಲಿಲ್ಲ.

    ಇದರಿಂದ ಅನುಮಾನಗೊಂಡ ವಿನಿತಾ ಮನೆಯ ಮಾಲೀಕರಿಗೆ ಕರೆ ಮಾಡಿ ಪರಿಶೀಲಿಸುವಂತೆ ಹೇಳಿದ್ದಾಳೆ. ವಿನಿತಾ ಮಾತಿನಂತೆ ಮನೆ ಬಳಿ ಹೋಗಿ ಪರಿಶೀಲಿಸಿದಾಗ ಅನಿಲ್​ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ವಿಚಾರವನ್ನು ಪೊಲೀಸರಿಗೆ ಹಾಗೂ ಕುಟುಂಬಸ್ಥರಿಗೆ ತಿಳಿಸಿದ ಮನೆಯ ಮಾಲೀಕರು ಅನಿಲ್​ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮದುವೆಗೆ ಕರೆಯಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹರ್ದೋಯಿ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts