More

    ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ

    ಪಣಜಿ: ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಭರಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳು ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದು ಸಹಜ, ಅದರಂತೆ ಈಗ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರು ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ ಎಂದು ಹೇಳುವ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.

    ಗೊವಾ ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿರಿಯಾಟೊ ಫರ್ನಾಂಡಿಸ್​ ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದು, ಎಲ್ಲರ ಕಣ್ಣು ಕೆಂಪಗಾಗಿಸಿದೆ. ಇತ್ತ ಈ ಕುರಿತು ಪ್ರತಿಕ್ರಿಯಿಸಿರುವ ಗೋವಾ ಸಿಎಂ ಪ್ರಮೋದ್​ ಸಾವಂತ್ ಕಾಂಗ್ರೆಸ್​ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬುದನ್ನು ಮೊತ್ತಮ್ಮೆ ನಿರೂಪಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

    ವೈರಲ್ ವಿಡಿಯೋದಲ್ಲಿ ಏನಿದೆ?

    1987ರಲ್ಲಿ ಗೋವಾ ಸ್ವತಂತ್ರ ರಾಜ್ಯವಾದ ಬಳಿಕ ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರು ಈ ರಾಜ್ಯ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸುತ್ತದೆ ಎಂದು ಹೇಳಿದ್ದರು. ಆದರೆ, ಅದು ಎಂದಿಗೂ ಸಂಭವಿಸಲಿಲ್ಲ. 1961ರಲ್ಲಿ ಗೋವಾ ವಿಮೋಚನೆಗೊಳಿಸಿದಾಗ ನಮ್ಮ ಮೇಲೆ ಬಲವಂತವಾಗಿ ಸಂವಿಧಾನವನ್ನು ಹೇರಲಾಯಿತು.

    ಇದನ್ನೂ ಓದಿ: ಫಯಾಜ್​ ಜತೆಗಿರುವ ಫೋಟೋಗಳು ವೈರಲ್​; ನೇಹಾ ತಾಯಿ ಹೇಳಿದ್ದೇನು?

    ನಾವು ರಾಹುಲ್​ ಗಾಂಧಿ ಅವರ ಬಳಿ ದ್ವಿಪೌರತ್ವ ಸೇರಿದಂತೆ 12 ಬೇಡಿಕೆಗಳನ್ನು ಇರಿಸಿದ್ದೇವೆ. ಈ ಬೇಡಿಕೆಗಳು ಸಾಂವಿಧಾನಿಕವಾಗಿದ್ದರೆ ಮಾತ್ರ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಆಗ ನಾನು ಅವರಿಗೆ ಹೇಳಿದೆ 1961ರಲ್ಲಿ ಪೋರ್ಚುಗೀಸ್​ ಆಡಳಿತದಿಂದ ಗೋವಾ ವಿಮೋಚನೆಗೊಂಡ ಬಳಿಕ ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಯಿತು ಎಂದು ವಿವರಿಸಿದೆ. ಆದರೆ, ಅದರಲ್ಲಿ ನಮ್ಮನ್ನು ಸೇರಿಸಲಾಗಲಿಲ್ಲ ಎಂದು ಹೇಳಿರುವುದಾಗಿ ಗೋವಾ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ವಿರಿಯಾಟೊ ಫರ್ನಾಂಡಿಸ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

    ಇತ್ತ ಕಾಂಗ್ರೆಸ್​ ಅಭ್ಯರ್ಥಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಗೀವಾ ಸಿಎಂ ಪ್ರಮೋದ್​ ಸಾವಂತ್, ಕಾಂಗ್ರೆಸ್​ ಅಭ್ಯರ್ಥಿಯ ಈ ಮಾತುಗಳನ್ನು ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರರು ಗೊವಾ ಭಾರತದ ಅವಿಭಾಜ್ಯ ಅಂಗ ಎಂದು ವಾದಿಸಿ ಅದಕ್ಕಾಗಿ ಹೋರಾಟ ನಡೆಸಿದರು. 14 ವರ್ಷಗಳ ಸತತ ಹೋರಾಟದ ಫಲವಾಗಿ ಇಂದು ಗೋವಾ ಭಾರತದ ಅವಿಭಾಜ್ಯ ಅಂಗವಾಗಿದೆ. ಇತ್ತ ಕಾಂಗ್ರೆಸ್​ನವರು ನೀಡುತ್ತಿರುವ ಹೇಳಿಕೆಯನ್ನು ನೋಡಿದರೆ ಅವರು ದೇಶದ ಸಂವಿಧಾನವನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts