ಟ್ರಂಪ್​ ಯೋಗಕ್ಷೇಮಕ್ಕಾಗಿ​ ಭಾರತದಲ್ಲಿ ಮಹಾಮೃತ್ಯುಂಜಯ್​​​ ಹೋಮ!

Untitled-design-3
Published on

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಯೋಗಕ್ಷೇಮ ಮತ್ತು ದೀರ್ಘಾಯುಷ್ಯ ನೀಡುವಂತೆ ಪ್ರಾರ್ಥಿಸಿ ಹಿಂದು ಸೇನೆಯು ಮಂಗಳವಾರ (ಜುಲೈ 16) ಹವನ ನಡೆಸಿದೆ. ದಿಲ್ಶಾದ್ ಗಾರ್ಡನ್‌ನಲ್ಲಿರುವ ಮಾಬಗ್ಲಾಮುಖಿ ಶಾಂತಿ ಪೀಠದಲ್ಲಿ ಜುಲೈ 16 ರಂದು ಆಚರಣೆ ನಡೆಸಿದ್ದಾರೆ.

ಟ್ರಂಪ್ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ. ಅವರನ್ನು ರಕ್ಷಿಸಲು ದೈವಿಕ ಹಸ್ತಕ್ಷೇಪದ ಅಗತ್ಯವಿದೆ ಎಂದು ಹಿಂದೂ ಸೇನೆಯ ವಕ್ತಾರರು ಹೇಳಿರುವುದಾಗಿ ಎಎನ್​ಐ ವರದಿ ಮಾಡಿದೆ. .ಹಿಂದೂ ಸೇನೆಯು ಬೃಹತ್ ಮಹಾಮೃತ್ಯುಂಜಯ್ ಜಪ ಹವನ ಯಾಗವನ್ನು ನಡೆಸಿದೆ. ಇದರಲ್ಲಿ 1.25 ಲಕ್ಷ ಪವಿತ್ರ ಮಹಾಮೃತ್ಯುಂಜಯ ಮಂತ್ರದ ಪಠಣ ಮಾಡಲಾಗಿದೆ. ಈ ಸೇನೆಯು ಬೃಹತ್ ಮಹಾಮೃತ್ಯುಂಜಯ್ ಜಪ ಹವನವು ರಕ್ಷಣಾತ್ಮಕ ಮತ್ತು ಗುಣಪಡಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.

ಟ್ರಂಪ್​​ ಅವರ ದಾರಿಯಲ್ಲಿ ಉಂಟಾಗುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವ ಉದ್ದೇಶದಿಂದ ಈ ಹವನವನ್ನು ಮಾಡಲಾಗಿದೆ. ಹಾಗೂ ಅವರು ದೀರ್ಘಕಾಲ ಬದುಕುತ್ತಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಬಟ್ಲರ್ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದ್ದು, ತಲೆಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಯಿತಾದರೂ ಟ್ರಂಪ್ ಅವರ ಬಲ ಕಿವಿಗೆ ಗಾಯವಾಯಿತು. ಕೂದಲೆಳೆ ಅಂತರದಲ್ಲಿ ಟ್ರಂಪ್​​ ಪಾರಾಗಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net