ಕಾಶ್ಮೀರಿಗಳನ್ನು ಪಾಕಿಸ್ತಾನಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದಿದ್ದೇಕೆ ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಮಂಗಳವಾರ (ಜುಲೈ 16) ಕಾಶ್ಮೀರದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಪ್ರಶ್ನಿಸಿ, ಪೊಲೀಸ್​​ ಮಹಾನಿರ್ದೇಶಕರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸ್ ಡಿಜಿಪಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಪಾಕಿಸ್ತಾನಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಸುಪ್ರೀಂಕೋರ್ಟ್​​ಗೆ ಇಬ್ಬರು ಹೊಸ ನ್ಯಾಯಧೀಶರ ನೇಮಕ; ಅಧಿಕೃತ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಪಾಕಿಸ್ತಾನದಿಂದ ನಿರಂತರ ನುಸುಳುವಿಕೆ ನಡೆಯುತ್ತಿದೆ. ಡಿಜಿಪಿ ಏನು ಮಾಡುತ್ತಿದ್ದಾರೆ? ಒಳನುಸುಳುವಿಕೆಯನ್ನು ತಡೆಯುವುದು ನನ್ನ ಮತ್ತು ಒಮರ್ ಅಬ್ದುಲ್ಲಾ ಅವರ ಕೆಲಸವೇ? ಅಷ್ಟಕ್ಕೂ ಗಡಿಯಲ್ಲಿ ಯಾರಿದ್ದಾರೆ? ಪರಿಸ್ಥಿತಿಯನ್ನು ನಿಯಂತ್ರಿಸುವುದು ಯಾರ ಜವಾಬ್ದಾರಿ ಎಂದು ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದಾರೆ.

ಪೊಲೀಸರನ್ನು ಏಕೆ ಮಿಲಿಟರಿಗೊಳಿಸಲಾಯಿತು? ಕಾಶ್ಮೀರಿಗಳಲ್ಲಿ ಅಪರಾಧದ ಬೀಜಗಳನ್ನು ಬಿತ್ತಿದ್ದು ಯಾರು? ಜನರು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಅಥವಾ ಪ್ರತಿಭಟಿಸಲು ಅವಕಾಶ ನೀಡುತ್ತಿಲ್ಲ. ಯಾರಾದರೂ ಹೀಗೆ ಮಾಡುತ್ತಿದ್ದರೆ ಅವರನ್ನು ಜೈಲಿಗೆ ಹಾಕಲಾಗುತ್ತಿದೆ. ಇದರಿಂದ ಡಿಜಿಪಿ ಸಾಧಿಸಿದ್ದೇನು? ಎಲ್ಲಾ ಕಾಶ್ಮೀರಿಗಳು ಅದರಲ್ಲೂ ವಿಶೇಷವಾಗಿ ಇಲ್ಲಿನ ಬಹುಸಂಖ್ಯಾತ ಸಮುದಾಯವನ್ನು ಪ್ರತ್ಯೇಕಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಮಾತನಾಡಿದ ಅವರು, 370ನೇ ವಿಧಿ ರದ್ದುಪಡಿಸಿದ ನಂತರ ಇಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಬಿಜೆಪಿ ಹೇಳುತ್ತದೆ. ಇಡಿ, ಎಸ್‌ಐಎಸ್ ಮತ್ತು ಎಸ್‌ಐಯು ಇಲ್ಲಿ ದಾಳಿ ನಡೆಸುತ್ತಿವೆ. ಜನರು ಏನನ್ನೂ ಹೇಳಲು ಅಥವಾ ತೋರಿಸಲು ಸಾಧ್ಯವಿಲ್ಲ. ಎಲ್ಲವೂ ಅವರ ನಿಯಂತ್ರಣದಲ್ಲಿದೆ ಎಂದು ಟೀಕಿಸಿದ್ದಾರೆ.(ಏಜೆನ್ಸೀಸ್​​)

ಮನೀಶ್​​ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ: ಸಿಬಿಐ, ಇಡಿಗೆ ಸುಪ್ರೀಂಕೋರ್ಟ್​​ ನೋಟಿಸ್​ ಜಾರಿ

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…