

ಹೆಬ್ರಿ: ಸಮಾಜಸೇವೆ ಶ್ರೇಷ್ಠ ಸೇವೆ. ನೀವು ನಿಮ್ಮನ್ನು ಸಕ್ರಿಯವಾಗಿ ಸೇವೆಯಲ್ಲಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ಉದ್ಯಮಿ ಎಂ. ದಿನೇಶ್ ಪೈ ಹೇಳಿದರು.
ಹರಿಖಂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹರಿಖಂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹರೀಶ್ಕುಮಾರ್ ಮಾತನಾಡಿದರು. ಪ್ರಾಂಶುಪಾಲ ಮಂಜುನಾಥ್ ಆಚಾರಿ, ಹರಿಖಂಡಿಗೆ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಂದಕುಮಾರ್ ಹಾಲಕ್ಕಿ, ಸಮುದಾಯ ಆರೋಗ್ಯ ಅಧಿಕಾರಿ ಸೌಮ್ಯಾ ನಾಯಕ್, ಯೋಜನಾಧಿಕಾರಿಗಳಾದ ಡಾ.ದತ್ತ ಕುಮಾರ್, ಕೋಕಿಲಾ ಎಚ್.ಎಸ್, ಗ್ರಂಥಪಾಲಕಿ ಸಂಗೀತ ಎಚ್, ಸಿಬ್ಬಂದಿ ಯಮುನಾ ಉಪಸ್ಥಿತರಿದ್ದರು.