ಕಾರ್ಕಳ: ರಾಷ್ಟ್ರ ಮಟ್ಟದಲ್ಲಿ ಐಐಟಿ ಪ್ರವೇಶಕ್ಕೆ ಎನ್‌ಟಿಎ ನಡೆಸುವ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ಬರೆದ 1,80,200 ವಿದ್ಯಾರ್ಥಿಗಳಲ್ಲಿ 48,248 ವಿದ್ಯಾರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಜ್ಞಾನಸುಧಾದ 12 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ರಾಷ್ಟ ಮಟ್ಟದ ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಬಿಪಿನ್ ಜೈನ್ 5161ನೇ ಶ್ರೇಣಿ, ಚಿರಂತನ ಜೆ.ಎ. 5374ನೇ ಶ್ರೇಣಿ, ಪ್ರಿಯಾಂಶ್ ಎಸ್.ಯು. 6128ನೇ ಶ್ರೇಣಿ, ಸಮ್ಮಿತ್ ಕೃಷ್ಣ ಯು. 12564ನೇ ಶ್ರೇಣಿ, ಕನ್ನಿಕಾ ದೀಪಕ್ ಶೆಟ್ಟಿ 13994ನೇ ಶ್ರೇಣಿ, ಪ್ರಥಮ್ ಕುಮಾರ್ ಶೆಟ್ಟಿ 16213ನೇ ಶ್ರೇಣಿ, ರಿಷಿತ್ ವೇಣು ಬಿಳಿಮಗ್ಗ 16471ನೇ ಶ್ರೇಣಿ, ಕ್ಷಿರಾಜ್ ಎಸ್.ಆಚಾರ್ಯ 18924ನೇ ಶ್ರೇಣಿ, ನಿಮೇಶ್ ಆರ್. ಆಚಾರ್ಯ 19153ನೇ ಶ್ರೇಣಿ, ಅದಿತ್ ಎನ್. ಪೂಜಾರಿ 19965ನೇ ಶ್ರೇಣಿ, ಪ್ರಣವ್‌ಕುಮಾರ್ ಭಂಡಿ 22987ನೇ ಶ್ರೇಣಿ ಮತ್ತು ಶ್ರೀದಾ ಕಾಮತ್ 24588ನೇ ಶ್ರೇಣಿ ಪಡೆದ ಸಾಧಕ ವಿದ್ಯಾರ್ಥಿಗಳು. ಸಂಸ್ಥೆಯ 3 ವಿದ್ಯಾರ್ಥಿಗಳು 7 ಸಾವಿರದೊಳಗಿನ ಶ್ರೇಣಿ, 10 ವಿದ್ಯಾರ್ಥಿಗಳು 20 ಸಾವಿರದೊಳಗಿನ ಶ್ರೇಣಿ ಗಳಿಸಿದ್ದು, ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.