ಅತ್ಯಾಧುನಿಕ ಶತಾಬ್ದಿ ರೈಲಿನಲ್ಲಿ ನೀವೊಮ್ಮೆ ಪ್ರಯಾಣಿಸಿ!

Shatabdi
Published on

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತೀಯ ರೈಲ್ವೇ ಇತಿಹಾಸದ ಚಿತ್ರಣವೇ ಬದಲಾಗಿದ್ದು, ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ವಿದೇಶಗಳಲ್ಲಿ ಮಾತ್ರ ಕಾಣುತ್ತಿದ್ದ ವಿಸ್ಟಡೊಮ್​ ಕೋಚ್​ ಹೊಂದಿರುವ ರೈಲನ್ನು ಇದೀಗ ನಮ್ಮ ದೇಶದಲ್ಲೇ ಕಾಣಬಹುದು. ಹೌದು ಮುಂಬೈ,ಸೂರತ್​​,ಅಹಮದಾಬಾದ್ ಮಾರ್ಗವಾಗಿ ಮುಂಬೈ ಸೆಂಟ್ರಲ್​ -ಗಾಂಧಿನಗರ ಶತಾಬ್ದಿ ಎಕ್ಸ್​ಪ್ರೆಸ್​​ ಮಂಗಳವಾರ ಸಂಚಾರ ಆರಂಭಿಸಿದೆ. ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣದ ಆನಂದವನ್ನು ಪಡೆದರು. ಈ ಬಗ್ಗೆ ವಿಡಿಯೋವೊಂದನ್ನು ರೈಲ್ವೇ ಇಲಾಖೆ ತನ್ನ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ.

ಏನಿದು ವಿಸ್ಟಡೊಮ್​ ಕೋಚ್​?

ಸುತ್ತಲೂ ಗಾಜುಗಳನ್ನು ಹೊಂದಿರುವ ಬೋಗಿ ಇದಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ರೈಲು ಅಭಿವೃದ್ಧಿಪಡಿಸಲಾಗಿದ್ದು, 360 ಡಿಗ್ರಿಯಲ್ಲಿ ಸುತ್ತಲಿನ ನಿಸರ್ಗವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net