ಪ್ರಿಯಾಂಕಾ ಛೋಪ್ರಾ ಅಜ್ಜಿಯನ್ನು ನೆನಪಿಸಿ,ಮಿಸ್​ ಯೂ ನಾನಿ ಎಂದಿದ್ದು ಏಕೆ?

Priyanka nani
Published on

ಮುಂಬೈ: ಬಾಲಿವುಡ್​ ಮಾತ್ರವಲ್ಲದೇ ಹಾಲಿವುಡ್​​ನಲ್ಲೂ ತನ್ನ ಛಾಪು ಮೂಡಿಸಿರುವ ಪ್ರಿಯಾಂಕಾ ಛೋಪ್ರಾ ಅವರು ತಮ್ಮ ಅಜ್ಜಿಯ ಜತೆಗಿನ ಬಾಲ್ಯದ ಫೋಟೋವನ್ನು ಶೇರ್​ ಮಾಡಿದ್ದಾರೆ.

ತಾಯಿ, ತಮ್ಮ, ಹಾಗೂ ಅಜ್ಜಿಯ ಜತೆಗಿರುವ ಸಣ್ಣ ವಯಸ್ಸಿನ ಈ ಚಿತ್ರಕ್ಕೆ ಟ್ವಿಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನನ್ನ ತಂದೆ-ತಾಯಿ ವೈದ್ಯಕೀಯ ವೃತ್ತಿಯಲ್ಲಿದ್ದಾಗ ನಮ್ಮ ಪಾಲನೆಗೆ ನಮ್ಮ ಜೀವನದಲ್ಲಿ ತಾಯಿಯ ತಾಯಿ (ಅಜ್ಜಿ) ಅವರ ಪಾತ್ರ ಮುಖ್ಯವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ನನ್ನ ಬೆಳವಣಿಗೆಗೆ ಅವರ ಪಾತ್ರ ಬಹಳಷ್ಟಿದೆ. ನನ್ನ ಪಾಲನೆಯ ಸ್ಥಿರ ಭಾಗವಾಗಿದ್ದಳು. ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಿಮಗೆ ಕೃತಜ್ಞನಾಗಿದ್ದೇನೆ. ಮಿಸ್​ ಯು ಎಂದೆಂದಿಗೂ ನಾನಿ, ನೀವು ಯಾವಾಗಲೂ ಮುದ್ದಾಗಿ ಕಾಣುಸುತ್ತೀರಾ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net