More

    ರಣಬೀರ್ -ಆಲಿಯಾ ಅದ್ಧೂರಿ ವಿವಾಹ: ಗೆಸ್ಟ್​ಗಳ ಲಿಸ್ಟ್​ ಇಲ್ಲಿದೆ

    ಮುಂಬೈ: ಬಾಲಿವುಡ್​ ನೆಚ್ಚಿನ ಜೋಡಿ ರಣಬೀರ್​ ಕಪೂರ್​ ಮತ್ತು ಆಲಿಯಾಭಟ್​ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. 14 ರಂದು ಹಸೆಮಣೆಗೇರಲಿರುವ ಈ ಜೋಡಿ ತಾಜ್​ ಕೊಲಬಾ ಪ್ಯಾಲೇಸ್​ನಲ್ಲಿ ಅದ್ಧೂರಿ ಆರತಕ್ಷತೆ ಮಾಡಿಕೊಳ್ಳಲಿದೆ.

    ಕುಟುಂಬಸ್ಥರು ಹಾಗೂ ಆಪ್ತರಿಗಷ್ಟೇ ವಿವಾಹಕ್ಕೆ ಆಹ್ವಾನ ನೀಡಲಾಗಿದೆ. ಕರಣ್​ ಜೋಹರ್ ಮದುವೆಯ ನಿರ್ವಹಣೆ ಹೊತ್ತಿದ್ದಾರೆ ಎನ್ನಲಾಗಿದ್ದು, ಅವರ ಅತ್ಯಾಪ್ತ ಶಾರೂಕ್​ ಖಾನ್​, ದೀಪಿಕಾ ಪಡುಕೋಡೆ ಸೇರಿದಂತೆ ಹಲವು ಬಾಲಿವುಡ್​ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮೆಹಂದಿ ಕಾರ್ಯಕ್ರಮಗಳು ನಡೆದಿದ್ದು, ಈ ಜೋಡಿ ಹಸೆಮಣೆಗೇರಲು ಇನ್ನೊಂದು ದಿನವಷ್ಟೇ ಬಾಕಿ ಇದೆ.

    ವರದಿಗಳ ಪ್ರಕಾರ ಮುಂಬೈಯಲ್ಲಿರುವ ರಣಬೀರ್ ಕಪೂರ್ ಅವರ ನಿವಾಸ ಕೃಷ್ಣರಾಜ್​ ಕಪೂರ್ ಬಂಗಲೆಯನ್ನು ಬೆಂಗಳೂರಿನಿಂದ ತರಿಸಲಾದ ವಿಶೇಷ ಅಲಂಕಾರಕ್ಕೆ ಬಳಸುವ ಬಿಳಿಬಣ್ಣದ ಹೂಗಳಿಂದ ಹಾಗೂ ಲೈಟ್ ನಿಂದ ಅಲಂಕರಿಸಲಾಗಿದೆ.

    ತಿರುಮಲದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ!

    ಕಲ್ಲಂಗಡಿ ಒಡೆದಾಗ ಮಾಲೀಕ ಜಾಗದಲ್ಲೇ ಇರಲಿಲ್ಲವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts