

ಮ್ಯಾಡ್ರಿಡ್: ಕರೊನಾ ವೈರಸ್ ಭೀತಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಎಲ್ಲರೂ ಸುರಕ್ಷಿತವಾಗಿರಿ, ಮನೆಯಿಂದ ಹೊರಗೆ ಬರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಎಲ್ಲರಿಗೂ ಎಚ್ಚರಿಕೆ ನೀಡುತ್ತಿದ್ದಾರೆ ವೈದ್ಯಕೀಯ ಸಿಬ್ಬಂದಿ. ಕರೊನಾ ವೈರಸ್ ಭೀತಿ ವಿರುದ್ಧ ಹೋರಾಡಲು ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಕೂಡ ಮಾಡುತ್ತಿದ್ದಾರೆ. ಒಲಿಂಪಿಕ್ ವಿಶ್ವ ಚಾಂಪಿಯನ್ ಷಟ್ಲರ್ ಕ್ಯಾರೊಲಿನಾ ಮರಿನ್, ತಾವು ಇದುವರೆಗೂ ಜಯಿಸಿರುವ ಪದಕಗಳನ್ನೇ ವೈದ್ಯಕೀಯ ಸಿಬ್ಬಂದಿಗೆ ನೀಡಲು ಮುಂದಾಗಿದ್ದಾರೆ.
27 ವರ್ಷದ ಕ್ಯಾರೊಲಿನಾ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ವರ್ಣ, 3 ಬಾರಿ ವಿಶ್ವ ಚಾಂಪಿಯನ್, 4 ಬಾರಿ ಯುರೋಪಿಯನ್ ಚಾಂಪಿಯನ್‌ಷಿಪ್ ಸೇರಿದಂತೆ 30ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.