PHOTOS | ಪಿವಿ ಸಿಂಧು ಬರ್ತ್​ಡೇ ಪಾರ್ಟಿ ಹೇಗಿತ್ತು ಗೊತ್ತಾ?

sindhu7
Published on

ಬೆಂಗಳೂರು: ಬ್ಯಾಡ್ಮಿಂಟನ್​ ವಿಶ್ವ ಚಾಂಪಿಯನ್​ ಪಿವಿ ಸಿಂಧು ಭಾನುವಾರ 25ನೇ ವಯಸ್ಸಿಗೆ ಕಾಲಿಟ್ಟರು. ಈ ವೇಳೆ ಅವರು ಹೈದರಾಬಾದ್​ನ ಮನೆಯಲ್ಲಿ ಕುಟುಂಬದ ಸದಸ್ಯರ ಜತೆಗೂಡಿ ಜನ್ಮದಿನದ ಸಂಭ್ರಮವನ್ನು ಆಚಿರಿಸಿದರು. ಈ ವಿಶೇಷ ಕ್ಷಣದ ಚಿತ್ರಗಳನ್ನು ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಮಾರ್ಚ್​ನಲ್ಲಿ ಬ್ರಿಟನ್​ನಲ್ಲಿ ಆಲ್​ ಇಂಗ್ಲೆಂಡ್​ ಚಾಂಪಿಯನ್​ಷಿಪ್​ನಲ್ಲಿ ಆಡಿ ತವರಿಗೆ ಮರಳಿದ ಬಳಿಕ ಬ್ಯಾಡ್ಮಿಂಟನ್​ನಿಂದ ಸಂಪೂರ್ಣವಾಗಿ ದೂರ ಉಳಿದಿರುವ ಪಿವಿ ಸಿಂಧು, ಜನ್ಮದಿನದ ಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದಗಳನ್ನೂ ತಿಳಿಸಿದ್ದಾರೆ. 'ನಾನಿಂದು ಜೀವನದ ಮತ್ತೊಂದು ವರ್ಷವನ್ನು ಪೂರ್ಣಗೊಳಿಸಿದೆ. ನಿಮ್ಮೆಲ್ಲರ ಶುಭಾಶಯಗಳಿಂದ ನನಗೆ ಈ ದಿನ ಮತ್ತಷ್ಟು ವಿಶೇಷವಾಗಿದೆ. ನೀವಿಲ್ಲದಿದ್ದರೆ ನನ್ನ ಬರ್ತ್​ಡೇ ಮತ್ತೊಂದು ಸಾಮಾನ್ಯ ದಿನವಾಗಿರುತ್ತಿತ್ತು. ಇಂದು ಮಾತ್ರವಲ್ಲ ನನ್ನೊಂದಿಗೆ ಎಲ್ಲ ಸಮಯದಲ್ಲಿ ಜತೆಯಾಗಿ ನಿಂತಿರುವುದಕ್ಕೆ ಧನ್ಯವಾದಗಳು' ಎಂದು ಪಿವಿ ಸಿಂಧು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಮನೆಯಲ್ಲಿ ಬರ್ತ್​ಡೇ ಪಾರ್ಟಿಗಾಗಿ ತಂದ ವಿವಿಧ ಕೇಕ್​ಗಳನ್ನು ಸಿಂಧು ಕತ್ತರಿಸಿದರು. ಇದೇ ವೇಳೆ ಅಕ್ಕನ ಮಗನ ಬರ್ತ್​ಡೇ ಕೂಡ ಇದ್ದ ಕಾರಣ ಇಬ್ಬರೂ ಜತೆಯಾಗಿ ಜನ್ಮದಿನದ ಸಂಭ್ರಮ ಆಚರಿಸಿದರು ಮತ್ತು ಕೇಕ್​ ಕತ್ತರಿಸಿ ಸಂಭ್ರಮಿಸಿದರು. ಸಿಂಧು ಬರ್ತ್​ಡೇಗಾಗಿ ಅವರ ಮನೆಯನ್ನೂ ವಿಶೇಷವಾಗಿ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net