More

    25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

    ಬೆಂಗಳೂರು: ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ನಲ್ಲಿ 16ನೇ ವಯಸ್ಸಿನಿಂದಲೂ ಸಾಧನೆಗಳನ್ನು ಮಾಡುತ್ತ ಬಂದಿರುವ ಹೈದರಾಬಾದ್​ನ ಆಟಗಾರ್ತಿ ಪಿವಿ ಸಿಂಧುಗೆ ಭಾನುವಾರ 25ನೇ ಜನ್ಮದಿನದ ಸಂಭ್ರಮ. ಈ ಸಮಯದಲ್ಲಿ ಅವರ ವೃತ್ತಿಜೀವನದ ಪ್ರಮುಖ 25 ಸಾಧನೆಗಳ ಮೆಲುಕು ಇಲ್ಲಿದೆ.

    25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

    1. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್(2019) ಜಯಿಸಿದ ಮೊದಲ ಭಾರತೀಯ ಷಟ್ಲರ್​.
    2. ಒಲಿಂಪಿಕ್ಸ್ (2016)ರಜತ ಪದಕ ಜಯಿಸಿದ ಭಾರತದ ಮೊದಲ ಮಹಿಳೆ.
    3. ವಿಶ್ವ ಚಾಂಪಿಯನ್​ಷಿಪ್​ನಲ್ಲಿ 5 ಪದಕ ಜಯಿಸಿದ 2ನೇ ಮಹಿಳಾ ಷಟ್ಲರ್​.
    4. ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಷಟ್ಲರ್.
    5. ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ರಾಜೀವ್ ಗಾಂಧಿ ಖೇಲ್​ರತ್ನ ಗೌರವ (2016).
    6. ದೇಶದ 3ನೇ ಅತ್ಯುತ್ತಮ ನಾಗರೀಕ ಗೌರವ ಪದ್ಮಭೂಷಣ ಪುರಸ್ಕಾರ (2020).
    7. ದೇಶದ 4ನೇ ಅತ್ಯುತ್ತಮ ನಾಗರೀಕ ಪ್ರಶಸ್ತಿ ಪದ್ಮಶ್ರೀ ಗೌರವ (2015).
    8. ಅಪ್ಪ ಪಿವಿ ರಮಣ ಅವರಂತೆ ಅರ್ಜುನ ಪ್ರಶಸ್ತಿ ಪುರಸ್ಕಾರ (2013).
    9. 2018ರ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿ.
    10. ಬಿಬಿಸಿ ವರ್ಷದ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿ (2020) ಗೌರವ.

    ಇದನ್ನೂ ಓದಿ: PHOTOS | ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧುಗೆ 25ನೇ ಬರ್ತ್​ಡೇ ಸಂಭ್ರಮ, ಶುಭಾಶಯಗಳ ಸುರಿಮಳೆ

    25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

    11. ಸತತ ಮೂರು ಬಾರಿ ವಿಶ್ವ ಚಾಂಪಿಯನ್​ಷಿಪ್ ಫೈನಲ್ ಪ್ರವೇಶ (2017-19).
    12. ವರ್ಷಾಂತ್ಯದ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ (2018) ಜಯಿಸಿದ ಏಕೈಕ ಭಾರತೀಯ ಷಟ್ಲರ್.
    13. ಏಷ್ಯನ್ ಗೇಮ್ಸ್ (2018) ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ರಜತ ಪದಕ ಜಯಿಸಿದ ಭಾರತದ ಏಕೈಕ ಆಟಗಾರ್ತಿ.
    14. ಕಾಮನ್ವೆಲ್ತ್ ಗೇಮ್ಸ್ ನಲ್ಲಿ (2018) ಮಹಿಳಾ ಸಿಂಗಲ್ಸ್​ನಲ್ಲಿ ಬೆಳ್ಳಿ, ಮಿಶ್ರ ತಂಡ ದಲ್ಲಿ ಸ್ವರ್ಣ ಪದಕ.
    15. ಕೊರಿಯಾ ಓಪನ್ (2017) ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಷಟ್ಲರ್.
    16. 2017ರ ವಿಶ್ವ ಚಾಂಪಿಯನ್​ಷಿಪ್ ಫೈನಲ್ ನಲ್ಲಿ ನಝೋಮಿ ಒಕುಹರಾ ವಿರುದ್ಧ 110 ನಿಮಿಷಗಳ ಹೋರಾಟದಲ್ಲಿ ಸೋಲು. ಇದು ಮಹಿಳಾ ಸಿಂಗಲ್ಸ್ ಇತಿಹಾಸದ 2ನೇ (19-21, 22-20,20-22)ಸುದೀರ್ಘ ಪಂದ್ಯ.
    17. ಸೈನಾ ನೆಹ್ವಾಲ್ ಬಳಿಕ ಚೀನಾ ಓಪನ್ ಜಯಿಸಿದ ಭಾರತದ 2ನೇ ಮಹಿಳೆ (2016).
    18. ಒಲಿಂಪಿಕ್ಸ್ ಪದಕ ಜಯಿಸಿದ ಭಾರತದ ಅತ್ಯಂತ ಕಿರಿಯ ಮಹಿಳೆ.
    19. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ (ಪಿಬಿಎಲ್ ) ಆಡಿದ ಎಲ್ಲ 5 ಪಂದ್ಯ ಗೆದ್ದು ಚೆನ್ನೈ ಸ್ಮ್ಯಾಷರ್ಸ್ ಗೆ ಪ್ರಶಸ್ತಿ ಗೆಲ್ಲಿಸಿಕೊಟ್ಟ ಸಾಧಕಿ.
    20. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್ ನಲ್ಲಿ ಸತತ 2 ಪದಕ (2013-14) ಜಯಿಸಿದ ಮೊದಲ ಭಾರತೀಯ ಷಟ್ಲರ್.

    ಇದನ್ನೂ ಓದಿ: ಚೀನಾ ಬ್ಯಾಡ್ಮಿಂಟನ್ ದಿಗ್ಗಜ ಲಿನ್ ಡ್ಯಾನ್ ವಿದಾಯ

    25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

    21. ಪ್ರಕಾಶ್ ಪಡುಕೋಣೆ ಬಳಿಕ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪದಕ ಜಯಿಸಿದ 2ನೇ ಭಾರತೀಯರು.
    22. ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟುಗಳ ಫೋರ್ಬ್ಸ್ ಪಟ್ಟಿಯಲ್ಲಿ (2018) ಸ್ಥಾನ.
    23. 2017ರ ಏಪ್ರಿಲ್​ನಲ್ಲಿ ವಿಶ್ವ ರಾಂಕಿಂಗ್​ನಲ್ಲಿ ಜೀವನ ಶ್ರೇಷ್ಠ 2ನೇ ರಾಂಕ್​.
    24. ವೃತ್ತಿಜೀವನದಲ್ಲಿ 465 ಪಂದ್ಯದಲ್ಲಿ 326ರಲ್ಲಿ ಗೆಲುವು.
    25. ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 15 ಸಿಂಗಲ್ಸ್ ಪ್ರಶಸ್ತಿ ಗೆಲುವು.

    ಕ್ರಿಕೆಟ್ ಪಂದ್ಯ ಆಡಿದ 51 ಆಟಗಾರರ ವಿರುದ್ಧ ಪೊಲೀಸ್ ಕೇಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts