More

    ಕ್ರಿಕೆಟ್ ಪಂದ್ಯ ಆಡಿದ 51 ಆಟಗಾರರ ವಿರುದ್ಧ ಪೊಲೀಸ್ ಕೇಸ್!

    ಗ್ರೇಟರ್ ನೋಯ್ಡಾ: ಸ್ಥಳೀಯಾಡಳಿತದ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕ್ರಿಕೆಟ್ ಪಂದ್ಯ ಆಡಿದ 51 ಮಂದಿಯ ವಿರುದ್ಧ ಗ್ರೇಟರ್ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಶುಕ್ರವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಆಡಲು ಬಂದಿದ್ದ ಆಟಗಾರರ 17 ಕಾರುಗಳ ವಿರುದ್ಧವೂ ದೂರು ದಾಖಲಾಗಿದೆ ಎಂದು ಗ್ರೇಟರ್ ನೋಯ್ಡಾದ ಡಿಸಿಪಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ದೆಹಲಿ ಮೂಲದ ಇಬ್ಬರು ಪಂದ್ಯವನ್ನು ಆಯೋಜಿಸಿದ್ದರು. ಅವರನ್ನು ದೀಪಕ್ ಅಗರ್ವಾಲ್ ಮತ್ತು ನಾಗಿಕ್ ಖುರಾನ ಎಂದು ಗುರುತಿಸಲಾಗಿದೆ. ಪಂದ್ಯ ಆಡಿದ್ದ ಕೆಲ ಆಟಗಾರರೂ ದೆಹಲಿಯವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ:  ಜೈಪುರದಲ್ಲಿ ಸಿದ್ಧವಾಗ್ತಿದೆ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ

    ‘ಯಾವುದೇ ಅನುಮತಿಯನ್ನು ಪಡೆದುಕೊಳ್ಳದೆ ನೋಲೆಡ್ಜ್ ಪಾಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯ ನಡೆದಿದೆ. ಕೋವಿಡ್-19ರಿಂದಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಕ್ರಿಕೆಟ್ ಪಂದ್ಯದ ವೇಳೆ ಇದು ಪಾಲನೆಯಾಗಿಲ್ಲ. ಹೀಗಾಗಿ 51 ಮಂದಿಯ ವಿರುದ್ಧ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 188 (ಸರ್ಕಾರಿ ಆದೇಶ ಉಲ್ಲಂಘನೆ), 269 (ಮಾರಕ ಸೋಂಕು ಹರಡುವಿಕೆಯ ಬಗ್ಗೆ ನಿರ್ಲಕ್ಷ್ಯ) ಮತ್ತು 270ರ (ಅಪಾಯಕಾರಿ ಸೋಂಕು ಹರಡುವಿಕೆಗೆ ಮರಣಾಂತಿಕ ಕಾರ್ಯ) ಅಡಿಯಲ್ಲಿ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ. ಸಾಂಕ್ರಾಮಿಕ ಪಿಡುಗಿನ ಕಾಯ್ದೆ ಅನ್ವಯವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರೇಟರ್ ನೋಯ್ಡದಲ್ಲಿ ಜುಲೈ 31ರವರೆಗೂ ಸೆಕ್ಷನ್ 144 ಜಾರಿಯಲ್ಲಿದೆ. ಇಲ್ಲಿ ಸಾವಿರಕ್ಕೂ ಅಧಿಕ ಸಕ್ರಿಯ ಕರೊನಾ ಪ್ರಕರಣಗಳಿವೆ.

    VIDEO| ಜಿಮ್‌ನಲ್ಲಿ ವಿರಾಟ್ ಕೊಹ್ಲಿ ನೆಚ್ಚಿನ ವ್ಯಾಯಾಮ ಯಾವುದು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts