Controversial: ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ, ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಉತ್ತರಪ್ರದೇಶದ ಸಮಾವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್ ಅವರು ಇದೀಗ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿರುದ್ಧ ಅಂತದ್ದೆ ಹೇಳಿಕೆ ನೀಡುವ ಮೂಲಕ ಪೇಚೆಗೆ ಸಿಲುಕಿದ್ದಾರೆ.

ಉತ್ತರ ಪ್ರದೇಶದ ಮೊರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್ ಭಾಗವಹಿಸಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ, ಕರ್ನಲ್ ಖುರೇಷಿ ಅವರ ವಿರುದ್ಧ ಸಚಿವ ವಿಜಯ್ ಶಾ ಹೇಳಿಕೆಗಳನ್ನು ಪ್ರಸ್ತಾಪಿಸುವ ಮೂಲಕ ವ್ಯೋಮಿಕಾ ಸಿಂಗ್ ಹಾಗೂ ಏರ್ಮಾರ್ಷಲ್ ಅವರ ಜಾತಿ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ರಾಮ್ ಗೋಪಾಲ್ ಯಾದವ್ ಹೇಳಿದ್ದೇನು..?
“ಕರ್ನಲ್ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ಸಚಿವರೊಬ್ಬರು ಮಾಡಿದ ಧಾರ್ಮಿಕ ಹೇಳಿಕೆಗಳ ಬಗ್ಗೆ ಹೈಕೋರ್ಟ್ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದೆ. ಆದರೆ ಅವರಿಗೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಏರ್ ಮಾರ್ಷಲ್ ಎ.ಕೆ. ಭಾರ್ತಿ ಬಗ್ಗೆ ತಿಳಿದಿರಲಿಲ್ಲ. “ಇಲ್ಲದಿದ್ದರೆ, ಅವರನ್ನು ಗುರಿಯಾಗಿಸಲಾಗುತ್ತಿತ್ತು” ಎಂದು ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ. ಈ ಸಂದರ್ಭದಲ್ಲಿ, ವ್ಯೋಮಿಕಾ ಸಿಂಗ್ ಮತ್ತು ಏರ್ ಮಾರ್ಷಲ್ ಎ.ಕೆ. ಭಾರ್ತಿ ಜಾತಿಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ನಕ್ಸಲ್ ಕಾರ್ಯಾಚರಣೆ ವೇಳೆ ಜೇನುನೋಣಗಳ ದಾಳಿ: ತಂಡದ ಗುರಾಣಿಯಂತಿದ್ದ CRPF Rolo ಹುತಾತ್ಮ!
“ಮೂವರೂ ಪಿಡಿಎ (ಪಿಕ್ಚಾ, ದಲಿತ, ಆಲ್ಪಸಂಖ್ಯಾಕ್ – ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು) ದಿಂದ ಬಂದವರು. ಒಬ್ಬರನ್ನು ಮುಸ್ಲಿಂ ಎಂಬ ಕಾರಣಕ್ಕಾಗಿ ನಿಂದಿಸಲಾಯಿತು, ಇನ್ನೊಬ್ಬರು ರಜಪೂತ ಎಂದು ಭಾವಿಸಿ ಬಿಡಲಾಯಿತು. ಮೂರನೆಯವರ ಬಗ್ಗೆ ತಿಳಿದಿಲ್ಲ. ಈಗ ಅದು ಪತ್ರಿಕೆಗಳಲ್ಲಿ ಬಂದಿರುವುದರಿಂದ, ಅವರು ಏನು ಮಾಡಬೇಕೆಂದು ಯೋಚಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಅದೇ ಸಮಯದಲ್ಲಿ, ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಿ ಭಯೋತ್ಪಾದಕರನ್ನು ಸೋಲಿಸಿದ ಸಶಸ್ತ್ರ ಪಡೆಗಳ ಸೇವೆಗಿಂತ ಬಿಜೆಪಿ ಸ್ವಯಂ ಹೊಗಳಿಕೆಗೆ ಆದ್ಯತೆ ನೀಡುತ್ತಿದೆ. ಮನಸ್ಥಿತಿ ಕೆಟ್ಟದಾಗಿದ್ದಾಗ, ಸೈನ್ಯದ ಸಾಧನೆಗಳ ಬಗ್ಗೆ ಮಾತನಾಡುವ ಬದಲು, ಅವರು ತಮ್ಮದೇ ಆದ ಯಶಸ್ಸನ್ನು ಎತ್ತಿ ತೋರಿಸುತ್ತಾರೆ ಎಂದು ರಾಮ್ ಗೋಪಾಲ್ ಯಾದವ್ ಆರೋಪಿಸಿದರು.(ಏಜೆನ್ಸೀಸ್)
ನಕ್ಸಲ್ ಕಾರ್ಯಾಚರಣೆ ವೇಳೆ ಜೇನುನೋಣಗಳ ದಾಳಿ: ತಂಡದ ಗುರಾಣಿಯಂತಿದ್ದ CRPF Rolo ಹುತಾತ್ಮ!