

ಚೆನ್ನೈ: ಗಾನ ಮಾಂತ್ರಿಕ ಎಸ್ಪಿಬಿ ಇನ್ನು ನೆನಪು ಮಾತ್ರ. ಅವರು ಬಿಟ್ಟುಹೋಗಿರುವ 40 ಸಾವಿರಕ್ಕೂ ಅಧಿಕ ಹಾಡುಗಳೇ ಅವರು ನೀಡಿದ ಕೊಡುಗೆ. ಇದೇ ಮಹಾನ್ ಗಾಯಕ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಸಾಕಷ್ಟು ಅವರ ಹಳೇಯ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಅಂಥ ಒಂದು ವಿಡಿಯೋ ಇಲ್ಲಿದೆ. ಶ್ರೀಲಂಕಾದಲ್ಲಿ ನಡೆದ ಸ್ಫೋಟವೊಂದರಲ್ಲಿ ಕಣ್ಣು ಕಳೆದುಕೊಂಡ ಅಭಿಮಾನಿಗೆ ಎಸ್ಪಿ ಬಾಲಸುಬ್ರಮಣ್ಯಂ ಅಚ್ಚರಿಯ ರೀತಿಯಲ್ಲಿ ಸರ್ಪ್ರೈಸ್ ನೀಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಮಹಾನ್ ಗಾಯಕನ ವ್ಯಕ್ತಿತ್ವವನ್ನು ಗುಣಗಾನ ಮಾಡುತ್ತಿದ್ದಾರೆ.