

ಬೆಂಗಳೂರು: ಅವತಾರ ಪುರುಷ ಚಿತ್ರದ ಶೂಟಿಂಗ್ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ನಟ ಶರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಚ್ಎಂಟಿ ಮೈದಾನದಲ್ಲಿ ಕಳೆದೊಂದು ವಾರದಿಂದ ಶೂಟಿಂಗ್ ನಡೆಯುತ್ತಿತ್ತು. ಆ್ಯಕ್ಷನ್ ಸೀನ್ಗಳ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು. ಈ ವೇಳೆ ಒಮ್ಮಿಂದೊಮ್ಮೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ನಟಿ ಶ್ರುತಿ ಆಗಮಿಸಿದ್ದಾರೆ. ಚಿತ್ರೀಕರಣದ ವೇಳೆ ಈ ದುರಂತ ಸಂಭವಿಸಿದ್ದರಿಂದ ಮೊದಲಿಗೆ ತಂಡಕ್ಕೂ ಇದು ಆತಂಕ ತಂದೊಡ್ಡಿತ್ತು. ಬಳಿಕ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದ ಬಳಿಕ ನಿಟ್ಟುಸಿರು ಬಿಟ್ಟಿದೆ.
ಈಗಾಗಲೇ ಅವತಾರ ಪುರುಷ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಇನ್ನೇನು ಏಳೆಂಟು ದಿನದ ಶೂಟಿಂಗ್ ಮುಗಿದರೆ, ಶೂಟಿಂಗ್ ಮುಕ್ತಾಯವಾಗಲಿದೆ.