More

    ವೈರಲ್​ ವಿಡಿಯೋ ಕುರಿತು ಕೊನೆಗೂ ಸ್ಪಷ್ಟನೆ ನೀಡಿದ ಕರಣ್​ ಜೋಹರ್​

    ಮುಂಬೈ: ಕಳೆದ ವರ್ಷ ಜುಲೈ 28ರಂದು ಕರಣ್​ ಜೋಹರ್​ ನೀಡಿದ ಪಾರ್ಟಿಯಲ್ಲಿ ಬಾಲಿವುಡ್​ ನಟ-ನಟಿಯರಾದ ದೀಪಿಕಾ ಪಡುಕೋಣೆ, ವಿಕ್ಕಿ ಕೌಶಾಲ್​, ರಣಬೀರ್ ಕಪೂರ್​, ವರುಣ್​ ಧವನ್​, ಮಲೈಕಾ ಅರೋರಾ ಸೇರಿದಂತೆ ಹಲವರು ಡ್ರಗ್ಸ್​ ತೆಗೆದುಕೊಂಡಿದ್ದರು ಎಂಬ ಸುದ್ದಿಯೊಂದು ಕೇಳಿ ಬರುತ್ತಲೇ ಇದೆ. ಅಷ್ಟೇ ಅಲ್ಲ, ಈ ಪಾರ್ಟಿಯ ವಿಡಿಯೋವೊಂದು ಇಂಟರ್​ನೆಟ್​ನಲ್ಲಿ ಸಾಕಷ್ಟು ವೈರಲ್​ ಸಹ ಆಗಿದೆ.

    ಇದನ್ನೂ ಓದಿ: ಸುಶಾಂತ್ ಪ್ರಕರಣದ ಸುದ್ದಿನೇ ಇಲ್ಲ, ಬರೀ ಡ್ರಗ್ಸ್​ ವಿಚಾರ; ನಟನ ಕುಟುಂಬದ ಅಳಲು

    ಕರಣ್​ ಜೋಹರ್​ ಪಾರ್ಟಿಯಲ್ಲಿ ಡ್ರಗ್ಸ್​ ಸರಬರಾಜಾಗಿದೆ ಎಂಬ ವಿಷಯ ಸಾಕಷ್ಟು ಸುದ್ದಿಯಾಗಿದ್ದರೂ, ಕರಣ್​ ಜೋಹರ್​ ಮಾತ್ರ ಈ ವಿಷಯವಾಗಿ ಯಾವುದೇ ಒಂದು ಮಾತನಾಡಿರಲಿಲ್ಲ. ಸ್ಪಷ್ಟೀಕರಣ ಕೊಡುವುದಕ್ಕೆ ಹೋಗಿರಲಿಲ್ಲ. ಈಗ ತಮ್ಮ ಸೋಷಿಯಲ್​ ಮೀಡಿಯಾ ಮೂಲಕ ಇಷ್ಟುದ್ದದ ಪತ್ರವನ್ನು ಅವರು ಬರೆದುಕೊಂಡಿದ್ದಾರೆ.

    ಕರಣ್​ ಹೇಳುವಂತೆ ಅವರು ಕಳೆದ ವರ್ಷವೇ ಈ ಬಗ್ಗೆ ಮಾತನಾಡಿದ್ದರಂತೆ. ತಮ್ಮ ಪಾರ್ಟಿಯಲ್ಲಿ ಡ್ರಗ್ಸ್​ ಸರಬರಾಜಾಗಿಲ್ಲ ಎಂದು ಹೇಳಿದ್ದರಂತೆ. ಆದರೂ ಕೆಲವು ಮಾಧ್ಯಮಗಳಲ್ಲಿ ಹಳೆಯ ವಿಡಿಯೋವೊಂದನ್ನು ಹಾಕಿ ತಮ್ಮ ಮಾನ ಹರಾಜು ಹಾಕುತ್ತಿವೆ ಎಂದು ಕರಣ್​ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು ಎನ್ನುವುದರ ಜತೆಗೆ, ಪಾರ್ಟಿಯಲ್ಲಿ ಡ್ರಗ್ಸ್​ ಸರಬರಾಜಾಗಿಲ್ಲ ಎಂದು ಪುನರುಚ್ಛರಿಸಿದ್ದಾರೆ.

    ‘ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಪ್ರಸಾರಾಗುತ್ತಿರುವುದರಿಂದ ನನ್ನ ಬಗ್ಗೆ, ನನ್ನ ಪ್ರೊಡಕ್ಷನ್​ ಕಂಪೆನಿಯ ಬಗ್ಗೆ ಜನರಲ್ಲಿ ಅಸಹನೆ ಹೆಚ್ಚುತ್ತಿದೆ. ಈ ಕುರಿತಾಗಿ ಒಂದು ವಿಷಯವನ್ನು ಸ್ಪಷ್ಟಪಡಿಸುವುದಕ್ಕೆ ಬಯಸುತ್ತೇನೆ. ನಾನು ಯಾವತ್ತೂ ಡ್ರಗ್ಸ್​ ತೆಗೆದುಕೊಂಡಿಲ್ಲ ಮತ್ತು ಡ್ರಗ್ಸ್​ ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸುವುದೂ ಇಲ್ಲ’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಟ್ವೀಟಿಗರಿಂದ ಬೆನ್ನು ತಟ್ಟಿಸಿಕೊಂಡರು ಶಾನ್ವಿ … ಯಾಕೆ ಹೇಳಿ?

    ಇನ್ನು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕ್ಷಿತಿಜ್​ ಪ್ರಸಾದ್​ ಮತ್ತು ಅನುಭವ್​ ಚೋಪ್ರಾ ಅವರು ಡ್ರಗ್ಸ್​ ಜಾಲದಲ್ಲಿ ಸಿಕ್ಕಿಬಿದ್ದಿರುವ ವಿಷಯದ ಕುರಿತು ಮಾತನಾಡಿರುವ ಅವರು, ತಮ್ಮ ಸಂಸ್ಥೆಗೂ ಮತ್ತು ಅವರಿಬ್ಬರಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಬಹಳ ವರ್ಷಗಳ ಹಿಂದೆಯೇ ಅವರಿಬ್ಬರೂ ತಮ್ಮ ಸಂಸ್ಥೆಯನ್ನು ಬಿಟ್ಟು ಹೋಗಿದ್ದು, ಆ ನಂತರ ಅವರೇನೇ ಮಾಡಿದರೂ ಸಂಸ್ಥೆ ಅದಕ್ಕೆ ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ.

    ನ್ಯಾಯಾಲಯದ ಮಾತು ಕೇಳಿ ಕಂಗನಾ ಕಣ್ಣಲ್ಲಿ ನೀರು ಬಂತಂತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts