

ನವದೆಹಲಿ: ದೀಪಾವಳಿ ಹಬ್ಬದ ಸೀಸನ್ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ನ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ 2020-21ರ ಎಂಟನೇ ಸರಣಿಯ ಬಾಂಡ್ಗಳು ನವೆಂಬರ್ 9 ರಿಂದ 13ನೇ ತಾರೀಕಿನ ತನಕ ಖರೀದಿಗೆ ಲಭ್ಯವಿದೆ.
ಇಂಡಿಯಾ ಬುಲಿಯನ್ ಆ್ಯಂಡ್ ಜುವೆಲ್ಲರಿ ಅಸೋಸಿಯೇಷನ್ ಲಿಮಿಟೆಡ್ ಮೂಲಕ ಗ್ರಾಹಕರಿಗೆ ತಲುಪುವ ಈ ಬಾಂಡ್ 999 ಪರಿಶುದ್ಧತೆಯ ಚಿನ್ನದ್ದಾಗಿದ್ದು, ಗ್ರಾಂಗೆ 5,177 ರೂಪಾಯಿ ನಿಗದಿ ಮಾಡಲಾಗಿದೆ. ಡಿಜಿಟಲ್ ಪಾವತಿ ಮತ್ತು ಆನ್ಲೈನ್ ಮೂಲಕ ಖರೀದಿಸುವವರಿಗೆ ಪ್ರತಿ ಗ್ರಾಂ ಗೆ 50 ರೂಪಾಯಿ ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಆರ್ಬಿಐ ಹೇಳಿದೆ.
ಏಳನೇ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಅಕ್ಟೋಬರ್ 12ರಿಂದ 16ರ ತನಕ ಲಭ್ಯವಿತ್ತು. ಅಂದು ಗ್ರಾಂಗೆ 5,051 ರೂಪಾಯಿ ಇತ್ತು. ಭಾರತ ಸರ್ಕಾರದ ಪರವಾಗಿ ಆರ್ಬಿಐ ಈ ಗೋಲ್ಡ್ ಬಾಂಡ್ಗಳನ್ನು ಪ್ರಕಟಿಸುತ್ತಿದೆ. (ಏಜೆನ್ಸೀಸ್)