

ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕ್ರೀಡಾಪಟು ಓರ್ವಳ ಬಳೆಯ ಮೇಲೆ ಕಣ್ಣು ಬಿದ್ದಿದೆ.
ಪ್ರಶಸ್ತಿ ನೀಡಲು ಕ್ರೀಡಾಪಟುಗಳನ್ನು ಸಾಲಾಗಿ ಖುರ್ಚಿಯ ಮೇಲೆ ಕೂರಿಸಲಾಗಿತ್ತು. ಸ್ವಿಮ್ಮಿಂಗ್ನಲ್ಲಿ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ಖುಷಿ ದಿನೇಶ್ ಧರಿಸಿದ್ದ ಬಳೆಯನ್ನು ನೋಡಿ ಮುಖ್ಯಮಂತ್ರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಖುಷಿಯ ಕೈ ಹಿಡಿದುಕೊಂಡು ಬಳೆ ನೋಡಿದ ಯಡಿಯೂರಪ್ಪನವರು, ಇದು ಚಿನ್ನದ ಬಳೆನಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಖುಷಿ..ಇಲ್ಲ ಸರ್ ಆರ್ಟಿಫಿಷಿಯಲ್ ಎಂದಿದ್ದಕ್ಕೆ, ಈ ತರ ಸಮಾರಂಭಕ್ಕೆಲ್ಲ ಚಿನ್ನದ ಬಳೆ ಹಾಕಿಕೊಂಡು ಬರಬೇಕಮ್ಮಾ ಎಂದು ಸಿಎಂ ಹಾಸ್ಯ ಮಾಡಿದ್ದಾರೆ. ಮುಖ್ಯಮಂತ್ರಿ ಖುಷಿಯ ಬಳೆ ಹಿಡಿದು ನೋಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ: https://www.facebook.com/DighvijayNews/videos/364210528348248