More

    ಕಡಿಮೆ ದರದಲ್ಲಿ ಚಿನ್ನ ಬೇಕಾ? ಕೇಂದ್ರ ಸರ್ಕಾರದಿಂದ ಶುರುವಾಗಿದೆ ಗೋಲ್ಡ್ ಬಾಂಡ್ ಯೋಜನೆ

    ನವದೆಹಲಿ: ಇನ್ನೇನು ದಸರಾ, ದೀಪಾವಳಿ ಶುರುವಾಗಿದೆ. ಹಬ್ಬ ಎಂದಾಕ್ಷಣ ಅಲ್ಲಿ ಚಿನ್ನ, ಹೊಸಹೊಸ ಬಟ್ಟೆಗಳ ಖರೀದಿಯ ಭರಾಟೆ ಜೋರು. ಅದರಲ್ಲಿಯೂ ಕರೊನಾ ಇರಲಿ, ಏನೇ ಬರಲಿ… ಲಕ್ಷ್ಮಿ ಹಬ್ಬಕ್ಕೆ ಚಿನ್ನವಿಲ್ಲದಿದ್ದರೆ ಆದೀತೆ?

    ಇದೇ ಕಾರಣಕ್ಕೆ, ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಖರೀದಿ ಮಾಡಲು ಬಯಸುವವರಿಗಾಗಿ ಕೇಂದ್ರ ಸರ್ಕಾರ, ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಶುರು ಮಾಡಿದೆ. ಇದಾಗಲೇ ಆರು ಸರಣಿಗಳು ಮುಕ್ತಾಯಗೊಂಡಿದ್ದು, ಇಂದಿನಿಂದ (ಅಕ್ಟೋಬರ್​ 12) ಏಳನೇ ಸರಣಿ ಶುರುವಾಗಿದೆ.

    ಅಕ್ಟೋಬರ್ 16ರವರೆಗೆ ಈ ಬಾಂಡ್​ನಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಮಾರುಕಟ್ಟೆ ಬೆಲೆಗಿಂತ ಅಗ್ಗದ ದರದಲ್ಲಿ ಚಿನ್ನವನ್ನು ಖರೀದಿಸಲು ಅವಕಾಶ ಇರುವ ಸರ್ಕಾರ ಬಾಂಡ್​ ಇದಾಗಿದೆ.

    ಏನಿದು ಸಾವರಿನ್ ಗೋಲ್ಡ್ ಬಾಂಡ್​?
    ಸಾವರಿನ್‌ ಗೋಲ್ಡ್‌ ಬಾಂಡ್‌ ಕೇಂದ್ರ ಸರ್ಕಾರದ ಬಾಂಡ್‌ ಆಗಿದೆ. ಗೋಲ್ಡ್​ ಬಾಂಡ್​ ಪಡೆದುಕೊಂಡು ಅದನ್ನು ಚಿನ್ನದ ರೂಪದಲ್ಲಿ ಪರಿವರ್ತನೆ ಮಾಡುವ ಯೋಜನೆ ಇದು. ಮಾರುಕಟ್ಟೆ ಬೆಲೆಗಿಂತ ಅಗ್ಗದಲ್ಲಿ ಚಿನ್ನವನ್ನು ಕೊಳ್ಳಲು ಈ ಬಾಂಡ್​ ಅವಕಾಶ ನೀಡುತ್ತದೆ.

    ಇದನ್ನು ಡಿಮ್ಯಾಟ್‌ ರೂಪದಲ್ಲಿ ಪರಿವರ್ತಿಸಬಹುದಾಗಿದೆ. ಇದರ ಮೌಲ್ಯವನ್ನು ರೂಪಾಯಿ ಅಥವಾ ಡಾಲರ್‌ಗಳ ಮುಖಬೆಲೆಯಲ್ಲಿ ಅಳೆಯಲಾಗುವುದಿಲ್ಲ. ಬದಲಾಗಿ ಚಿನ್ನದ ಮಾರುಕಟ್ಟೆಯ ಮೂಲಕ ದರ ನಿಗದಿ ಪಡಿಸಲಾಗುತ್ತದೆ. ಬಾಂಡ್‌ 5 ಗ್ರಾಂ. ಚಿನ್ನದ್ದಾಗಿದ್ದರೆ, ಐದು ಗ್ರಾಂ ಚಿನ್ನದ ಬೆಲೆ ಬಾಂಡ್‌ ಬೆಲೆಗೆ ಸಮನಾಗಿರುತ್ತದೆ. ಬಾಂಡ್‌ ಅನ್ನು ಹಿಂದಕ್ಕೆ ಪಡೆಯುವ ಸಮಯದಲ್ಲಿ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ.

    ಹೂಡಿಕೆ ಮಾಡುವುದು ಹೇಗೆ?
    ನೀವು ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ ನೀವು ಪ್ಯಾನ್ ನಂಬರ್​ ಹೊಂದಿರಬೇಕು. ಈ ಬಾಂಡ್​ಗಳನ್ನು ನೀವು ಎಲ್ಲಾ ವಾಣಿಜ್ಯ ಬ್ಯಾಂಕುಗಳಿಂದ (ಆರ್‌ಆರ್‌ಬಿ, ಸ್ಮಾಲ್ ಫೈನಾನ್ಸ್ ಬ್ಯಾಂಕ್, ಪಾವತಿ ಬ್ಯಾಂಕ್ ಹೊರತುಪಡಿಸಿ), ಅಂಚೆ ಕಚೇರಿ, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್‌ಎಸ್‌ಇ), ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಅಥವಾ ನೇರವಾಗಿ ಏಜೆಂಟರ ಮೂಲಕ ಪಡೆದುಕೊಳ್ಳಬಹುದು.

    ಯಾವ ದರದಲ್ಲಿ?
    ರಿಸರ್ವ್ ಬ್ಯಾಂಕ್ ಚಿನ್ನದ ಬಾಂಡ್‌ಗಳಿಗೆ ಪ್ರತಿ ಗ್ರಾಂಗೆ 5,051 ರೂ. ಅಂದರೆ, 10 ಗ್ರಾಂ ಚಿನ್ನದ ಬೆಲೆ 50,510 ರೂಪಾಯಿ ಆಗಿರುತ್ತದೆ. ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಡಿಜಿಟಲ್ ಪಾವತಿ ಮಾಡಿದರೆ, ನಿಮಗೆ 50 ರೂ.ಗಳ ರಿಯಾಯಿತಿ ಸಿಗುತ್ತದೆ, ನಂತರ ನೀವು ಪ್ರತಿ ಗ್ರಾಂಗೆ 5001 ರೂಪಾಯಿ ಪಾವತಿಸಿದರೆ ಆಯಿತು.

    ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಗಿಫ್ಟ್​- ನಿರ್ಮಲಾ ಸೀತಾರಾಮನ್​ ಘೋಷಣೆ

    ಮುಕ್ತಾಯ ಅವಧಿ ಎಷ್ಟು?
    ಸಾವರಿನ್ ಗೋಲ್ಡ್ ಬಾಂಡ್ ದೀರ್ಘಾವಧಿಯ ಹೂಡಿಕೆಯಾಗಿದೆ. ಇದರ ಮುಕ್ತಾಯ ಅವಧಿ 8 ವರ್ಷ. ಆದರೆ ನೀವು ಅದನ್ನು 5 ನೇ ವರ್ಷದಿಂದ ನೀವು ವಾಪಸ್​ ಪಡೆದುಕೊಳ್ಳಬಹುದು. ಆ ಸಮಯದಲ್ಲಿ ನೀವು ಪಡೆಯುವ ಬೆಲೆ ಆ ಸಮಯದಲ್ಲಿ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಯನ್ನು ಅವಲಂಬಿಸಿರುತ್ತದೆ.

    ಎಷ್ಟು ಹೂಡಿಕೆ ಮಾಡಬಹುದು?
    ಸಾವರಿನ್ ಗೋಲ್ಡ್ ಬಾಂಡ್‌ನ ವಿಶೇಷತೆಯೆಂದರೆ, ಅದರಲ್ಲಿ ಕೇವಲ 1 ಗ್ರಾಂ ಚಿನ್ನವನ್ನು ಖರೀದಿಸುವ ಮೂಲಕ ನೀವು ಪ್ರಾರಂಭಿಸಬಹುದು. ನೀವು ಆರ್ಥಿಕ ವರ್ಷದಲ್ಲಿ 4 ಕೆ.ಜಿ ಚಿನ್ನವನ್ನು ಖರೀದಿಸಬಹುದು. ಸರ್ಕಾರವು ನಿಮಗೆ ಚಿನ್ನದ ಬಾಂಡ್‌ಗಳಲ್ಲಿ ವಾರ್ಷಿಕವಾಗಿ ಶೇಕಡಾ 2.5 ರಷ್ಟು ಬಡ್ಡಿಯನ್ನು ನೀಡುತ್ತದೆ. ಅಂದರೆ, ಹೆಚ್ಚುತ್ತಿರುವ ಚಿನ್ನದ ಬೆಲೆಗಳನ್ನು ಹೊರತುಪಡಿಸಿ, ನೀವು ಪ್ರತ್ಯೇಕವಾಗಿ ಬಡ್ಡಿಯನ್ನು ಸಹ ಪಡೆಯುತ್ತೀರಿ.

    ಬಿಜೆಪಿ ಸೇರಿದ ಖುಷ್ಬೂ: ಅನುಮಾನಗಳಿಗೆ ತೆರೆ ಎಳೆದ ನಟಿ

    ಬಿಜೆಪಿ ಕಾರ್ಪೊರೇಟರ್​ ಮೇಲೆ ಗುಂಡಿನ ದಾಳಿ- ಸಾವು

    ಬಿಜೆಪಿ ಕಾರ್ಪೊರೇಟರ್​ ಮೇಲೆ ಗುಂಡಿನ ದಾಳಿ- ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts