ಆಫರ್​.. ಆಫರ್​..ಮಗುವಿಗೆ ಜನ್ಮ ನೀಡಿದ್ರೆ ಸಿಗುತ್ತೆ 62 ಲಕ್ಷ ರೂಪಾಯಿ

baby
Published on

ನವದೆಹಲಿ: ಕಂಪನಿಗಳು ತಮ್ಮ ನೌಕರರಿಗೆ ಬೋನಸ್, ಟ್ರಿಪ್ , ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಗಿಫ್ಟ್ ಕೊಡುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಕಂಪನಿ ಮಕ್ಕಳು ಜನ್ಮ ನೀಡಿದ್ರೆ ನಾವು ಹಣ ಕೊಡುತ್ತೇವೆ ಎಂದು ಉದ್ಯೋಗಿಗಳಿಗೆ ಆಫರ್​ ನೀಡಿದೆ. ಇದು ವಿತ್ರ ಎಂದು ನಿಮಗೆ ಅನ್ನಿಸಿದ್ರು ಇದು ಸತ್ಯ.

ಬೋಯಂಗ್ ಗ್ರೂಪ್ ಕಂಪನಿ ಮಕ್ಕಳನ್ನು ಪಡೆಯಲು ಉದ್ಯೋಗಿಗಳಿಗೆ ಹಣದ ಸಹಾಯ ಮಾಡುತ್ತಿದೆ. ಈ ಪಂಪನಿ ಯಾಕೆ ಇಂತಹ ನಿರ್ಧಾರ ಮಾಡಿದೆ. ಕಂಪನಿ ಇದನ್ನು ಪ್ರೋತ್ಸಾಹಧನ ಎಂದು ಕರೆದಿರುವ ಹಿಂದೆ ಒಂದು ಮಹತ್ತರವಾದ ವಿಷಯ ಕೂಡಾ ಇದೆ.

ಕಂಪನಿ ಇದಕ್ಕೆ ಸಂಬಂಧಿಸಿದಂತೆ ಒಂದು ಪ್ರೆಸ್ ನೋಟ್ ಬಿಡುಗಡೆ ಮಾಡಿದೆ. ಅದ್ರಲ್ಲಿ ತನ್ನ ಉದ್ಯೋಗಿಗಳಿಗೆ ಮಗುವನ್ನು ಹೊಂದಲು 62.34 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದೆ. ಇದಲ್ಲದೆ 2021 ರಿಂದ ಒಟ್ಟು 70 ಮಕ್ಕಳನ್ನು ಹೊಂದಿರುವ ಸಿಬ್ಬಂದಿ ಸದಸ್ಯರಿಗೆ ಒಟ್ಟು 43.6 ಕೋಟಿ ರೂಪಾಯಿ ನಗದನ್ನು ವಿತರಿಸಲು ಕಂಪನಿಯು ಘೋಷಿಸಿದೆ. ಇಲ್ಲಿ ಬರೀ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ ಪುರುಷ ಉದ್ಯೋಗಿಗಳಿಗೂ ಮಕ್ಕಳನ್ನು ಪಡೆಯಲು ಹಣದ ನೆರವು ಸಿಗಲಿದೆ.

ಕೋರಿಯಾದಲ್ಲಿ ಜನನ ಪ್ರಮಾಣವು ವೇಗವಾಗಿ ಕಡಿಮೆಯಾಗುತ್ತಿದೆ.ಮಕ್ಕಳ ಪಾಲನೆ ಈಗಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ಜನರು ಒಂದೋ ಎರಡೋ ಮಕ್ಕಳಿಗೆ ಸೀಮಿತಗೊಳಿಸ್ತಿದ್ದಾರೆ. ಇದೇ ಕಾರಣಕ್ಕೆ ಕಂಪನಿ ಇಂಥ ಕ್ರಮಕೈಗೊಂಡಿದೆ. ಕಂಪನಿಯು ಹೆಚ್ಚಿನ ಮಕ್ಕಳನ್ನು ಹೊಂದುವ ಉದ್ಯೋಗಿಗಳಿಗೆ ಆರ್ಥಿಕವಾಗಿ ಹಣವನ್ನು ನೀಡುವ ಘೋಷಣೆ ಮಾಡಿದೆ.

 ಮೂರು ಮಕ್ಕಳನ್ನು ಹೊಂದಿರುವ ಉದ್ಯೋಗಿಗಳು ಬಾಡಿಗೆ ಮನೆ ಅಥವಾ 1.8 ಕೋಟಿ ರೂಪಾಯಿ ಮಧ್ಯೆ ಒಂದನ್ನು ಆಯ್ಕೆ ಮಾಡುವ ಸೌಲಭ್ಯ ಹೊಂದಿರುತ್ತಾರೆ. ಈ ಕಂಪನಿಯನ್ನು 1983 ರಲ್ಲಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 270,000 ಮನೆಗಳನ್ನು ನಿರ್ಮಿಸಲಾಗಿದೆ. ಈ ಕಂಪನಿ ಅಲ್ಲದೆ ಕೋರಿಯಾ ಸರ್ಕಾರ ಹಾಗೂ ಕೆಲ ಸಂಘ ಸಂಸ್ಥೆಗಳು ಕೂಡ ವಾರ್ಷಿಕ ಸಹಾಯ ನೀಡುತ್ತಿವೆ.

ಕಂಪನಿ ಆರ್ಥಿಕ ಸಹಾಯ ಮಾಡುತ್ತಿರುವ ಕಾರಣ, ಮಕ್ಕಳ ಪೋಷಣೆ ಉದ್ಯೋಗಿಗಳಿಗೆ ಸುಲಭವಾಗಲಿದೆ ಎಂದು ಕಂಪನಿಯ ಅಧ್ಯಕ್ಷ ಲೀ ಜಂಗ್-ಕ್ಯುನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net