More

  ರಸ್ತೆ ಅಪಘಾತದಲ್ಲಿ ಯುವಕ ಸಾವು; ಡಿಕ್ಕಿ ಹೊಡೆದ ಸವಾರ ಕೂಡಾ ಪಶ್ಚಾತ್ತಾಪದಿಂದ ಪ್ರಾಣ ಬಿಟ್ಟ

  ಮಡಿಕೇರಿ: ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಬಿಟ್ಟಿದ್ದ. ಅಪಘಾತ ಮಾಡಿದ ಪಶ್ಚಾತ್ತಾಪದಿಂದ ಹಿರಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಘಟನೆ ಮಡಿಕೇರಿಯಲ್ಲಿ ನಡೆದಿದೆ.

  ಧನಲ್ ಸುಬ್ಬಯ್ಯ (24) ಮೃತ ವಿದ್ಯಾರ್ಥಿ, ಹೆಚ್.ಡಿ.ತಮ್ಮಯ್ಯ(57) ಮೃತ. ತಮ್ಮಯ್ಯ ಸ್ಕೂಟರ್‌ ಡಿಕ್ಕಿ ಹೊಡೆದು ‌ಈ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದೆ ಧನಲ್ ಬಾಳು ನಾಶವಾಯ್ತು ಎಂದು ಮನನೊಂದು ಹೆಚ್.ಡಿ.ತಮ್ಮಯ್ಯ ಆತ್ಮಹತ್ಯೆಗೆ ಶರಣಗಾಗಿದ್ದಾರೆ.

  ಮಡಿಕೇರಿಯ ಚೈನ್‌ ಗೇಟ್‌ ಬಳಿ ವಿದ್ಯಾರ್ಥಿ ಧನಲ್ ಸುಬ್ಬಯ್ಯ ಬೈಕ್‌ನಲ್ಲಿ ಬರುತ್ತಿದ್ದ. ಮೂರು ರಸ್ತೆ ಸೇರುವಲ್ಲಿ ಸವಾರ ಹೆಚ್.ಡಿ.ತಮ್ಮಯ್ಯ ಸ್ಕೂಟಿಯಲ್ಲಿ ಬಂದರು. ಆಗ ಸ್ಕೂಟಿ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ರಸ್ತೆಗೆ ಬಿದ್ದ. ಅಷ್ಟೇ ಹೊತ್ತಿಗೆ ಒಂದು ಲಾರಿ ಆತನ ಪಕ್ಕದಲ್ಲೇ ಹಾದು ಹೋಗಿದೆ. ಮಡಿಕೇರಿ ಬಳಿಕ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಇತ್ತ ಡಿಕ್ಕಿ ಹೊಡೆದ ವ್ಯಕ್ತಿ ಹೆಚ್.ಡಿ.ತಮ್ಮಯ್ಯ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದರು. ಅಪಘಾತದ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಿ ಆ ಹುಡುಗನಿಗೆ ಏನಾಗಿದೆ ಎಂದು ಕೇಳಿಕೊಂಡಿದ್ದಾರೆ. ಆ ಯುವಕನಿಗೆ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಕೇಳುತ್ತಲೇ ಅವರಿಗೆ ಪಶ್ಚಾತ್ತಾಪವಾಗಿದೆ. ನನ್ನಿಂದಾಗಿ ಒಬ್ಬ ಯುವಕನ ಬಾಳು ಹೀಗಾಯಿತಲ್ಲ ಮನನೊಂದ ನೇಣು ಬಿಗಿದುಕೊಂಡಿದ್ದಾರೆ. ಇತ್ತ ಅದೇ ಹೊತ್ತಿಗೆ ಮೆದುಳು ನಿಷ್ಕ್ರಿಯಗೊಂಡು ಧನಲ್ ಕೂಡಾ ಕೊನೆಯುಸಿರೆಳೆದಿದ್ದಾನೆ.

  ಕರ್ನಾಟಕದ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ; ರಾಜ್ಯಪಾಲ ಗೆಹ್ಲೋಟ್

  “ಬೆಳ್ಳುಳ್ಳಿ ಕಬಾಬ್” ಟ್ರೆಂಡ್ ಬೆನ್ನಲ್ಲೇ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ; ಮೊಯೆ..ಮೊಯೆ ಎಂದ ಗ್ರಾಹಕರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts