More

    ಭಕ್ತರ ರಕ್ಷಕಿ ತಿಪ್ಪಿನಘಟ್ಟಮ್ಮ ಜಾತ್ರೆಗೆ ಸಿದ್ಧತೆ

    ಚಿತ್ರದುರ್ಗ: ಐತಿಹಾಸಿಕ ಕೋಟೆನಗರಿಯ ನವದುರ್ಗೆಯರಲ್ಲಿ ತ್ರಿಪುರಸುಂದರಿ ಎಂದೇ ಪ್ರಸಿದ್ಧಿ ಪಡೆದಿರುವ ನಗರದೇವತೆ ತಿಪ್ಪಿನಘಟ್ಟಮ್ಮ ದೇವಿಯೂ ಭಕ್ತೋದ್ಧಾರಕಿಯಾಗಿ ಬೇಡಿದ ಭಕ್ತರನ್ನು ರಕ್ಷಿಸುತ್ತಿದ್ದಾಳೆ.

    ನಗರದ ಜೋಗಿಮಟ್ಟಿ ರಸ್ತೆಯ ಐದನೇ ತಿರುವಿನ ಮೂಲ ದೇಗುಲದಲ್ಲಿ ಒಡಮೂಡಿ ತಾಯಿ ನೆಲೆಯೂರಿದ್ದಾಳೆ. ಉಜ್ಜಯನಿ ಮಠದ ರಸ್ತೆಯಲ್ಲಿ ಅಮ್ಮನ ಪಾದದ ಗುಡಿ ಇದ್ದು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ನೂರಾರು ಭಕ್ತರು ದರ್ಶನ ಪಡೆಯುತ್ತಾರೆ.

    3 ದಶಕಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ದೇವಿಯ ಮೂಲ ದೇಗುಲ ಸಂಪೂರ್ಣ ಕಲ್ಲಿನಿಂದಲೇ ನಿರ್ಮಿತವಾಗಿದ್ದು, ಚಿಕ್ಕದಾಗಿತ್ತು. ಸಾವಿರಾರು ಭಕ್ತರ ಸಹಕಾರದಿಂದ ಆಧುನಿಕ ಸ್ಪರ್ಶ ನೀಡಿ ವಿಶಾಲವಾಗಿ ನಿರ್ಮಿಸಿ ಶಾಸ್ತ್ರ, ಸಂಪ್ರದಾಯದಂತೆ ಲೋಕಾರ್ಪಣೆಗೊಂಡಿದೆ. ದೇಗುಲವೂ ಭಕ್ತರನ್ನು ಆಕರ್ಷಿಸುತ್ತಿದ್ದು, ಬೇಡಿದ ಇಷ್ಟಾರ್ಥ ಈಡೇರಿಸುವ ಈ ದೇವಿಯನ್ನು ಅನೇಕರು ಆರಾಧಿಸುತ್ತ ಬಂದಿದ್ದಾರೆ.

    ದೇವಿಯ ಜಾತ್ರಾ ಮಹೋತ್ಸವವೂ ಶುಕ್ರವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಕಂಕಣಧಾರಣೆ, ಮಧುವಣಗಿತ್ತಿ ಪೂಜಾ ಕೈಂಕರ್ಯದೊಂದಿಗೆ ಆರಂಭವಾಗಿದ್ದು, 15 ದಿನದವರೆಗೂ ನಡೆಯಲಿದೆ.

    ಏ. 30ರಂದು ಉಜ್ಜಯನಿ ಮಠದ ರಸ್ತೆಯಲ್ಲಿರುವ ಪಾದದ ಗುಡಿಯಿಂದ ಹೊರಡುವ ಉತ್ಸವ ಮೂರ್ತಿಯನ್ನು ಜೋಗಿಮಟ್ಟಿ ರಸ್ತೆಯಲ್ಲಿರುವ ಮೂಲ ಸನ್ನಿಧಿಗೆ ಕರೆತರುವುದು.

    ಮೇ 1ರಂದು ಬ್ರಾಹ್ಮೀ ಮುಹೂರ್ತದಲ್ಲಿ ದೇಗುಲ ಸಮೀಪದ ಮಜ್ಜನ ಬಾವಿಯಲ್ಲಿ ದೇವಿಯ ಗಂಗಾಪೂಜೆ, ಕುಂಭಾಭಿಷೇಕ ಮತ್ತು ಜಲ್ದಿ ಪೂಜೆ ನಂತರ ದೇಗುಲ ತಲುಪುವುದು. ಮಧ್ಯಾಹ್ನ 3ರ ನಂತರ ಐಯುಡಿಪಿ ಬಡಾವಣೆ, ಟೀಚರ್ಸ್‌ ಕಾಲನಿ, ವಿವೇಕಾನಂದ ನಗರ, ಜಟ್‌ಪಟ್ ನಗರದ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.

    2ರಂದು ಧವಳಗಿರಿ ಬಡಾವಣೆ, ಕೋಡೇನಹಟ್ಟಿ, ವಿದ್ಯಾನಗರ, ರೈಲ್ವೆಸ್ಟೇಷನ್, ಜೆಸಿಆರ್-ವಿಪಿ ಬಡಾವಣೆ, ದರ್ಜಿ ಕಾಲನಿಯ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.

    3ರಂದು ಎಸ್.ಆರ್.ಲೇಔಟ್ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ. ಮಧ್ಯಾಹ್ನ 12ರಿಂದ ದೇವಿಗೆ ಮೀಸಲು ಪಾನಕ, ಎಡೆ ಬಿಡಾರ, ಹಿಟ್ಟಿನ ಆರತಿ ಹಾಗೂ ಬೇವಿನ ಸೀರೆ ಸೇವೆ ಜರುಗಲಿದೆ.

    4ರಂದು ಕನಕನಗರ, ಮಲ್ಲಾಪುರ ಗೊಲ್ಲರಹಟ್ಟಿ, ಮಲ್ಲಾಪುರ, ಪಿಳ್ಳೇಕೆರೆನಹಳ್ಳಿ, ಗೋಪಾಲಪುರ ರಸ್ತೆಯ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.

    5ರಂದು ಮೂಲ ದೇಗುಲ ಮುಂಭಾಗ ಬೆಳಗ್ಗೆ 10ಕ್ಕೆ ಜಗಳೂರು ತಾಲೂಕಿನ ಪಾತಲಿಂಗೇಶ್ವರ ಗುಡಿಕಟ್ಟಿನ ಮಾನಂಗಿ ಗ್ರಾಮದ ಪೋತರಾಜ್ ಮತ್ತು ಸಹೋದರರಿಂದ ವಿಶೇಷ ಸೇವೆ ನೆರವೇರಲಿದೆ. ಅಂದು ಜೋಗಿಮಟ್ಟಿ ರಸ್ತೆ, ಸುಣ್ಣದಗುಮ್ಮಿ, ಜಟ್‌ಪಟ್ ನಗರ, ಆಡುಮಲ್ಲೇಶ್ವರ ರಸ್ತೆ, ರಾಜೇಂದ್ರ ನಗರ ಸೇರಿ ಇತರೆಡೆ ಭಕ್ತರ ಮನೆಗಳಲ್ಲಿ ಮಹಾಮಂಗಳಾರತಿ ಪೂಜೆ ಸ್ವೀಕಾರ.

    6ರಂದು ಸಂತೆಪೇಟೆ, ಹೊರಪೇಟೆ, ಚನ್ನಕೇಶವಪುರ, ಚರ್ಚ್ ಬಡಾವಣೆ, ಕೆಳಗೋಟೆ ಸೇರಿ ವಿವಿಧೆಡೆಯ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ಕ್ಯಾತಲಿಂಗೇಶ್ವರ ಸ್ವಾಮಿ ದೇಗುಲಕ್ಕೆ ಕರೆತರುವುದು.

    8ರಂದು ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ನೆಹರು ನಗರದ ಭಕ್ತರಿಂದ ಪೂಜೆ ಸ್ವೀಕರಿಸಿದ ಬಳಿಕ ಗಂಗಾಪೂಜೆಯೊಂದಿಗೆ ಉಜ್ಜಯನಿಮಠ ರಸ್ತೆಯಲ್ಲಿರುವ ಪಾದದ ಗುಡಿಯಲ್ಲಿ ಗುಡಿದುಂಬುವ ಕಾರ್ಯಕ್ರಮ. 10ರಂದು ಕಂಕಣ ವಿಸರ್ಜನೆ, ಜೋಗುಟದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

    ಐತಿಹಾಸಿಕ ಭೇಟಿ 7ಕ್ಕೆ: 7ರಂದು ಕ್ಯಾತಲಿಂಗೇಶ್ವರ ಸ್ವಾಮಿ ದೇಗುಲದಲ್ಲಿ ದೇವಿಯನ್ನು ವಿಶೇಷವಾಗಿ ಪುಷ್ಪ, ಇತರೆ ವಸ್ತುಗಳಿಂದ ಅಲಂಕರಿಸಿ, ಮಹಾಮಂಗಳಾರತಿಯಾದ ನಂತರ ಹೊರಟು ದೊಡ್ಡಪೇಟೆಯಲ್ಲಿ ರಾತ್ರಿ 8ಕ್ಕೆ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಅಕ್ಕತಂಗಿಯರ ಐತಿಹಾಸಿಕ ಭೇಟಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ನಂತರ ರಾತ್ರಿ 10ಕ್ಕೆ ತಿಪ್ಪಿನಘಟ್ಟಮ್ಮ ದೇವಿಯನ್ನು ಕಾಟಲಿಂಗೇಶ್ವರ ಸ್ವಾಮಿ ದೇಗುಲಕ್ಕೆ ಕರೆತರುವುದು.

    ಆಕರ್ಷಿಸುವ ಉತ್ಸವ ಮೂರ್ತಿ: ಉತ್ಸವ ಮೂರ್ತಿಯೂ ಅತ್ಯಂತ ಆಕರ್ಷಣೀಯವಾಗಿ ಇರುವ ಕಾರಣ ತ್ರಿಪುರಸುಂದರಿ ತಿಪ್ಪ್ಪಿನಘಟ್ಟಮ್ಮ ಎಂದು ಭಕ್ತರು ಪ್ರೀತಿಯಿಂದ ಕರೆಯುತ್ತಿದ್ದು, ಇಂದಿಗೂ ಪ್ರಚಲಿತದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts