ಶಾಲೆ ಪಠ್ಯದಲ್ಲಿ ನಟಿ ತಮನ್ನಾ ಕುರಿತ ಪಾಠ! ಪಾಲಕರು ಅಸಮಾಧಾನ..

tamanna
Published on

ಬೆಂಗಳೂರು: ಪಠ್ಯಪುಸ್ತಕದಲ್ಲಿ ನಟಿ ತಮನ್ನಾ ಭಾಟಿಯಾ ಕುರಿತಾದ ಅಧ್ಯಾಯ ಅಳವಡಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಸಿಂಧಿ ಶಾಲೆ ಆಡಳಿತದ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಪ್ರಸ್ತುತ ಇದು ವಿವಾದಕ್ಕೆ ಕಾರಣವಾಗಿದೆ.

ಸಿಂಧ್ ವಿಭಜನೆಯ ನಂತರ ಭಾರತೀಯರ ಜನಜೀವನ ಎಂಬ ವಿಷಯದಡಿ ತಮನ್ನಾ ಭಾಟಿಯಾ ಅವರ ಅಧ್ಯಾಯವನ್ನು ಮಕ್ಕಳಿಗೆ ಈ ಖಾಸಗಿ ಶಾಲೆಯಪಠ್ಯದಲ್ಲಿ ಅಳವಡಿಸಲಾಗಿದೆ.

ಇದಕ್ಕೆ ವಿದ್ಯಾರ್ಥಿಗಳ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮನ್ನಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಅಂಥ ಸಿನಿಮಾಗಳಲ್ಲಿ ಅವರು ಪೋರ್ನ್ ರೀತಿಯ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಅಂಥವರು ಮಕ್ಕಳಿಗೆ ಆದರ್ಶವಾಗಬೇಕೇ. ಅವರಿಂದ ಮಕ್ಕಳು ಕಲಿಯುವುದಾದರೂ ಏನು ಎಂದು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net