

ನವದೆಹಲಿ: ಕುಟುಂಬ ರಾಜಕಾರಣದಿಂದ ಯಾವ ಪಕ್ಷವೂ ಹೊರತಾಗಿಲ್ಲ. ಆದರೆ ಇದು ಅತಿಯಾದರೆ ಏನೆಲ್ಲ ಅವಾಂತರಗಳಾಗಬಹುದು ಎಂಬ ನಿದರ್ಶನಗಳು ಜನರ ಕಣ್ಣಮುಂದೆಯೇ ಇವೆ. ಇಂತಹುದರಲ್ಲಿ ಅಖಿಲೇಶ್ ಯಾದವ್ ಕುಟುಂಬ ಉತ್ತರ ಪ್ರದೇಶದ ಐವರು ಸಂಸದರನ್ನು ಹೊಂದಿದೆ. ಆ ಐವರೂ ಮಂಗಳವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಖಿಲೇಶ್ ಯಾದವ್ ಅವರ ತಂದೆ ದಿ. ಮುಲಾಯಂ ಸಿಂಗ್ ಯಾದವ್ ಬಹಳ ಹಿಂದಿನಿಂದಲೂ ರಾಜಕೀಯದಲ್ಲಿದ್ದವರು. ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮುಲಾಯಂಸಿಂಗ್ ಅವರ ರಾಜಕೀಯ ಉತ್ತರಾಧಿಕಾರಿಯಾಗಿ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಉಸ್ತುವಾರಿ ವಹಿಸಿಕೊಂಡರು. ಅಖಿಲೇಶ್ ಯುಪಿ ಸಿಎಂ ಆಗಿಯೂ ಸೇವೆ ಸಲ್ಲಿಸಿದ್ದರು. ಯಾದವ್ ಕುಟುಂಬ ಸಂಕಷ್ಟದಲ್ಲಿದೆ. ಮತ್ತೊಂದೆಡೆ, ಪ್ರಬಲ ಯಾದವ ಸಮಾಜದ ನಾಯಕರೆನಿಸಿಕೊಂಡಿರುವ ಅಖಿಲೇಶ್ ಕುಟುಂಬದ ಐವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.
ಯಾರು ಆ ಐವರು?: ಅಖಿಲೇಶ್ ಯಾದವ್ ಕನೌಜ್‌ನಿಂದ ಗೆದ್ದಿದ್ದಾರೆ. ಅಖಿಲೇಶ್ ಪತ್ನಿ ಡಿಂಪಲ್ ಮೈನಾಪುರಿಯಿಂದ ಗೆದ್ದಿದ್ದಾರೆ. ಇನ್ನು ಅವರ ಬಂಧುಗಳಾದ ಅಜಂಗಢದಿಂದ ಧರ್ಮೇಂದ್ರ ಯಾದವ್, ಫಿರೋಜಾಬಾದ್‌ನಿಂದ ಅಕ್ಷಯ್ ಯಾದವ್ ಮತ್ತು ಬದೌನ್‌ನಿಂದ ಆದಿತ್ಯ ಯಾದವ್ ಗೆದ್ದಿದ್ದಾರೆ.