More

    ಇನ್ಮುಂದೆ ಹೊಸ ಇನ್ನಿಂಗ್ಸ್​ ಆಡ್ತಾರಂತೆ ಸೋನು … ಏನದು?

    ರಿಯಲ್​ ಲೈಫ್​ನಲ್ಲಿ ವಿಲನ್​ ಆಗಿದ್ದ ಸೋನು, ಲಾಕ್​ಡೌನ್​ ಸಮಯದಲ್ಲಿ ರಿಯಲ್ ಹೀರೋ ಆಗಿಬಿಟ್ಟರು. ಅದೆಷ್ಟು ವಲಸೆ ಕಾಮಿರ್ಕರನ್ನು ತಮ್ಮ ಊರುಗಳಿಗೆ ತಲುಪಿಸಿ ಅವರು ಪುಣ್ಯ ಕಟ್ಟಿಕೊಂಡರೋ ಗೊತ್ತಿಲ್ಲ. ಬರೀ ಅಷ್ಟೇ ಅಲ್ಲ, ಪ್ರತಿದಿನ ಒಂದಲ್ಲ ಒಂದು ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಸೋನು ಪ್ರತಿದಿನ ಸುದ್ದಿಯಲ್ಲಿದ್ದೇ ಇದ್ದಾರೆ.

    ಇದೆಲ್ಲದರಿಂದ ಅವರಿಗೆ ಪ್ಲಸ್​ ಆಗುವುದಕ್ಕಿಂತ ಹೆಚ್ಚಾಗಿ ಮೈನಸ್​ ಆಗುತ್ತದೆ ಎಂಬ ಮಾತು ಇದೀಗ ಕೇಳಿಬರುತ್ತಿದೆ. ಪ್ರಮುಖವಾಗಿ ಇತ್ತೀಚಿನ ವರ್ಷಗಳಲ್ಲಿ ನೆಗೆಟಿವ್​ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡವರು ಅವರು. ಇದೀಗ ಅವರು ರಿಯಲ್​ ಲೈಫ್​ನಲ್ಲಿ ಹೀರೋ ಆಗಿ ಗುರುತಿಸಿಕೊಂಡಿರುವುದರಿಂದ, ಚಿತ್ರಗಳಲ್ಲಿ ವಿಲನ್​ ಪಾತ್ರದಲ್ಲಿ ನಟಿಸುವುದು ಕಷ್ಟ.

    ಇದನ್ನೂ ಓದಿ: ಎಸ್​ಪಿಬಿ ಆರೋಗ್ಯ ಸ್ಥಿರ; ಆಸ್ಪತ್ರೆಯಿಂದ ಪ್ರಕಟಣೆ

    ಹೀಗಿರುವಾಗ, ಮುಂದಿನ ದಿನಗಳಲ್ಲಿ ಅವರಿಗೆ ಕೆಲಸ ಸಿಗುವುದು ಕಡಿಮೆ ಎಂದು ನಗೆನಟ ಅತುಲ್​ ಖಾತ್ರಿ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಟ್ವೀಟ್​ ಮಾಡಿರುವ ಅವರು, ‘ಸೋನುಗೆ ರಿಯಲ್​ ಲೈಫ್​ನಲ್ಲಿ ಹೀರೋ ಆಗಿರುವುದರಿಂದ, ರೀಲ್​ನಲ್ಲಿ ಅವಕಾಧಗಳು ಸಿಗುವುದು ಕಷ್ಟ. ಜನ ಅವರನ್ನು ನೆಗೆಟಿವ್​ ಪಾತ್ರಗಳಲ್ಲಿ ಒಪ್ಪಿಕೊಳ್ಳುವುದಿಲ್ಲ’ ಎಂದು ಭವಿಷ್ಯ ನುಡಿದಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಸೋನು, ‘ಹೊಸ ಇನ್ನಿಂಗ್ಸ್​ ಆಡುವುದಕ್ಕ ಇದು ಸಕಾಲ ಭಾಯ್​’ ಎಂದು ಹೇಳಿದ್ದಾರೆ. ಹೊಸ ಇನ್ನಿಂಗ್ಸ್​​ ಎಂದರೆ, ನೆಗೆಟಿವ್​ ಪಾತ್ರಗಳನ್ನು ಬಿಟ್ಟು ಅವರು ಹೀರೋ ಆಗಿ ಮುಂದುವರೆಯುತ್ತಾರಾ ಅಥವಾ ಕಾಮಿಡಿ ಪ್ರಯತ್ನಿಸುತ್ತಾರಾ ಎಂಬ ವಿಷಯವನ್ನು ಸೋನು ಬಿಟ್ಟುಕೊಟ್ಟಿಲ್ಲ.

    ಇದನ್ನೂ ಓದಿ: ಕನಸು ನನಸಾಗಿಸಿಕೊಳ್ಳಲು ಸುಶಾಂತ್​ ಏನು ಮಾಡಿದ್ದರು ಗೊತ್ತಾ?

    ಇನ್ನು ಅತುಲ್​ ಅವರ ಮಾತುಗಳನ್ನು ಹಲವರು ಒಪ್ಪಿಕೊಂಡಿಲ್ಲ. ಇನ್ನು ಮುಂದೆ ನೆಗೆಟಿವ್​ ಪಾತ್ರಗಳು ಸಿಗದಿದ್ದರೇನು, ಅವರಿಗೆ ಬೇರೆ ತರಹದ ಪಾತ್ರಗಳನ್ನು ಮಾಡುವ ಶಕ್ತಿ ಇದೆ ಎಂದು ಕೆಲವರು ಟ್ವೀಟ್​ ಮಾಡಿದ್ದಾರೆ.

    ಹಾಗಾದರೆ, ಸೋನು ಮುಂದೇನು ಮಾಡುತ್ತಾರೆ? ಅವರಿಗೆ ಅವಕಾಶಗಳು ಸಿಗುವುದು ಕಡಿಮೆಯಾಗುತ್ತದಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

    ‘ಆಲಿಯಾ ಬದ್ಲಾಗಲ್ಲ …’ ಎಂದ ರಾಜಮೌಳಿ ನಾಯಕಿ ಹುಡುಕ್ತಿರೋದು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts