More

    ‘ಆಲಿಯಾ ಬದ್ಲಾಗಲ್ಲ …’ ಎಂದ ರಾಜಮೌಳಿ ನಾಯಕಿ ಹುಡುಕ್ತಿರೋದು ಏಕೆ?

    ‘ಆರ್​ಆರ್​ಆರ್’ ಚಿತ್ರದಲ್ಲಿ ಬಾಲಿವುಡ್​ ನಟಿ ಆಲಿಯಾ ಭಟ್​ ನಟಿಸುತ್ತಾರೋ, ಇಲ್ಲವೋ ಎಂಬ ಸುದ್ದಿಯೊಂದು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ನಿರ್ದೇಶಕ ರಾಜಮೌಳಿ ಮಾತ್ರ, ಆಲಿಯಾ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ, ಆಕೆಯ ಬದಲು ಬೇರೆ ನಟಿ ಬರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

    ತೀರಾ ಇತ್ತೀಚೆಗೆ, ಆಲಿಯಾ ಅಭಿನಯದ ‘ಸಡಕ್​ 2’ ಚಿತ್ರಕ್ಕೆ ಪ್ರೇಕ್ಷಕರಿಂದ ಒಂದೇ ಸಮನೆ ಡಿಸ್ಲೈಕ್​ಗಳು ಸಿಕ್ಕ ಹಿನ್ನೆಲೆಯಲ್ಲಿ, ‘ಆರ್​ಆರ್​ಆರ್​’ ಚಿತ್ರದಿಂದ ಆಲಿಯಾಗೆ ಖೊಕ್​ ಕೊಡಲಾಗುತ್ತದಾ ಎಂಬ ಪ್ರಶ್ನೆ ಬಂದಿತ್ತು. ಆಗಲೂ ರಾಜಮೌಳಿ, ಯಾವುದೇ ಕಾರಣಕ್ಕೂ ತಮ್ಮ ಚಿತ್ರದ ನಾಯಕಿ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಇದನ್ನೂ ಓದಿ: ಕನಸು ನನಸಾಗಿಸಿಕೊಳ್ಳಲು ಸುಶಾಂತ್​ ಏನು ಮಾಡಿದ್ದರು ಗೊತ್ತಾ?

    ಆದರೆ, ಈಗಿನ ಸುದ್ದಿಯ ಪ್ರಕಾರ, ರಾಜಮೌಳಿ ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರಂತೆ. ಅದಕ್ಕೆ ಕಾರಣ, ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ತನಗೆ ಆಗುತ್ತಿಲ್ಲ ಎಂದು ಆಲಿಯಾ ಹೇಳಿರುವುದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ‘ಆರ್​ಆರ್​ಆರ್’ ಚಿತ್ರದ ಕೆಲಸಗಳು ಮುಗಿಯಬೇಕಿತ್ತು. ಆದರೆ, ಕರೊನಾ ಹಾವಳಿಯಿಂದ ಚಿತ್ರೀಕರಣ ಮುಂದೆ ಹೋಗುತ್ತಲೇ ಇದೆ. ಬಹುಶಃ ಡಿಸೆಂಬರ್​ ಹೊತ್ತಿಗೆ ಚಿತ್ರೀಕರಣ ಮತ್ತೆ ಶುರುವಾಗಬಹುದು ಎಂಬ ನಿರೀಕ್ಷೆ ಇದೆ.

    ಒಂದು ಪಕ್ಷ ಡಿಸೆಂಬರ್​ನಲ್ಲಿ ಚಿತ್ರೀಕರಣ ಶುರುವಾದರೆ, ಅದರಿಂದ ತಮ್ಮ ಇನ್ನಿತರ ಚಿತ್ರಗಳಿಗೆ ಸಮಸ್ಯೆ ಎದುರಾಗಬಹುದು ಎಂಬ ಭಯ ಆಲಿಯಾ ಭಟ್​ ಅವರದ್ದು. ಈಗಾಗಲೇ ‘ಬ್ರಹಾಸ್ತ್ರ’, ‘ತಖ್ತ್​’, ‘ಗಂಗೂಬಾಯಿ ಕತಿಯಾವಾಡಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ಆಲಿಯಾ, ಆ ಚಿತ್ರಗಳಿಗೆ ಡೇಟ್ಸ್​ ಕೊಟ್ಟಿದ್ದಾರಂತೆ. ಈಗ ‘ಆರ್​ಆರ್​ಆರ್​’ ಸಹ ಅದೇ ಸಮಯದಲ್ಲಿ ಚಿತ್ರೀಕರಣವಾದರೆ, ಎಲ್ಲಾ ಚಿತ್ರಗಳಿಗೆ ಸಮಸ್ಯೆ ಎಂಬ ಕಾರಣಕ್ಕೆ, ಬೇರೆ ನಾಯಕಿಯನ್ನು ನೋಡಿಕೊಳ್ಳಿ ಎಂದು ನಿರ್ದೇಶಕ ರಾಜಮೌಳಿ ಅವರಿಗೆ ಸಂದೇಶ ರವಾನಿಸಿದ್ದಾರಂತೆ.

    ಇದನ್ನೂ ಓದಿ: ಚಿರಂಜೀವಿ ಮನೆಗೆ ಬಂತು ಕಟ್ಟಿಗೆಯ ಬೈಕ್​…

    ನಾಯಕಿಯ ಬಾಯಿಂದಲೇ ಇಂಥದ್ದೊಂದು ಮಾತು ಬಂದಿರುವಾಗ, ರಾಜಮೌಳಿಗೂ ಬೇರೆ ದಾರಿ ಕಾಣುತ್ತಿಲ್ಲವಂತೆ. ಹಾಗಾಗಿ ಅವರು ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಲಿಯಾಗೆ ಪರ್ಯಾಯವಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ನಾಯಕಿಯನ್ನಾಗಿ ಮಾಡಿದರೆ ಹೇಗೆ ಎಂಬ ಆಲೋಚನೆ ರಾಜಮೌಳಿಗೆ ಬಂದಿದ್ದು, ಈ ಸಂಬಂಧ ಅವರನ್ನಾಗಲೇ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇಷ್ಟೆಲ್ಲಾ ಆಗುತ್ತಿದ್ದರೂ, ಚಿತ್ರತಂಡದ ಯಾರೊಬ್ಬರೂ ನಾಯಕಿ ಬದಲಾಗುತ್ತಿರುವ ಅಧಿಕೃತ ಘೋಷಣೆಯನ್ನು ಮಾಡಿಲ್ಲ.

    ‘ಆರ್​ಆರ್​ಆರ್​’ ಚಿತ್ರದಲ್ಲಿ ಜ್ಯೂನಿಯರ್​ ಎನ್​.ಟಿ.ಆರ್​ ಮತ್ತು ರಾಮ್​ಚರಣ್​ ತೇಜ ಜತೆಯಾಗಿ ನಟಿಸುತ್ತಿದ್ದು, ಅಜಯ್​ ದೇವಗನ್​ ಸಹ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುಇದ್ದಾರೆ. ಅಜಯ್​ ದೇವಗನ್​ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜಮೌಳಿ ಅವರ ಹೆಸರಿದೆ. ಇಷ್ಟೆಲ್ಲಾ ಪ್ಲಸ್​ಗಳು ಇರುವುದರಿಂದ, ಆಲಿಯಾ ಚಿತ್ರದಲ್ಲಿ ನಟಿಸುವುದು ಮೈನಸ್​ ಆಗುವುದಿಲ್ಲ ಎಂಬುದು ರಾಜಮೌಳಿ ಲೆಕ್ಕಾಚಾರ. ಅದೇ ಕಾರಣಕ್ಕೆ ಅವರನ್ನು ಮುಂದುವರೆಸುವುದಕ್ಕೆ ರಾಜಮೌಳಿ ತೀರ್ಮಾನಿಸಿದ್ದಾರೆ.

    ಎಸ್​ಪಿಬಿ ಆರೋಗ್ಯ ಸ್ಥಿರ; ಆಸ್ಪತ್ರೆಯಿಂದ ಪ್ರಕಟಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts