More

    ಚಿರಂಜೀವಿ ಮನೆಗೆ ಬಂತು ಕಟ್ಟಿಗೆಯ ಬೈಕ್​…

    ಟಾಲಿವುಡ್​ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ, ಶನಿವಾರವಷ್ಟೇ 65ನೇ ವಸಂತಕ್ಕೆ ಕಾಲಿರಿಸಿ ಆ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಸಿನಿಮಾ ತಂಡಗಳು ಬಗೆಬಗೆ ಪೋಸ್ಟರ್​ ಬಿಡುಗಡೆ ಮಾಡಿಕೊಳ್ಳುವ ಮೂಲಕ ಶುಭಾಶಯ ಕೋರಿವೆ. ಅಭಮಾನಿಗಳಂತೂ ಸೋಷಿಯಲ್​ ಮೀಡಿಯಾಗಳಲ್ಲಿ ಸಿಡಿಪಿ ರೆಡಿಮಾಡಿಕೊಂಡು, ಚಿರಂಜೀವಿ ಜನ್ಮದಿನವನ್ನು ಹಬ್ಬದಂತೆ ಆಚರಣೆ ಮಾಡಿದ್ದಾರೆ. ಇದೆಲ್ಲದರ ಮಧ್ಯೆ ತುಂಬ ಆಕರ್ಷಿಣೀಯವಾದ ಉಡುಗೊರೆಯೊಂದು ಚಿರು ಮನೆ ತಲುಪಿದೆ.

    ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ಡಾಲಿ ಧನಂಜಯ; ಚಿತ್ರತಂಡಗಳಿಂದ ಪೋಸ್ಟರ್ ಗಿಫ್ಟ್​

    ಹೌದು, ಟಾಲಿವುಡ್​ನ ಇನ್ನೋರ್ವ ಸ್ಟಾರ್ ನಟ ಮೋಹನ್​ ಬಾಬು ಚಿರು ಜನ್ಮದಿನದ ಪ್ರಯುಕ್ತ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಕಟ್ಟಿಗೆಯಿಂದಲೇ ತಯಾರಿಸಿದ ಬೈಕ್​ವೊಂದನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಆ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಿರು, ಮೋಹನ್​ ಬಾಬು ಅವರ ಗಿಫ್ಟ್​ಗೆ ಧನ್ಯವಾದ ಅರ್ಪಿಸಿದ್ದಾರೆ.

    ಇದನ್ನೂ ಓದಿ: ‘ಆದಿಪುರುಷ್​’ ಚಿತ್ರಕ್ಕೆ ‘ಗೇಮ್​ ಆಫ್​ ಥ್ರೋನ್ಸ್​’ ತಂಡದ ಗ್ರಾಫಿಕ್ಸ್​?

    ಅಂದಹಾಗೆ, ಆಚಾರ್ಯ ಚಿತ್ರದಲ್ಲಿ ಖಳನಾಯಕನಾಗಿ ಮೋಹನ್​ ಬಾಬು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಚಿರು ವಿರುದ್ಧ ಮೋಹನ್​ ಬಾಬು ತೊಡೆ ತಟ್ಟಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. (ಏಜೆನ್ಸೀಸ್​)

    ಮತ್ತೆ ವೀರಪ್ಪನ್ ಆದ ಕಿಶೋರ್​ … ವೆಬ್​ಸೀರೀಸ್​ಗೆ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts