

ಸ್ಯಾಂಡಲ್ವುಡ್ ಮಟ ಡಾಲಿ ಧನಂಜಯ್ಗಿವತ್ತು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಅವರ ಅಭಿಮಾನಿಗಳು ಅಷ್ಟೇ ಅದ್ದೂರಿಯಾಗಿ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ. ಸಿನಿಮಾ ತಂಡಗಳೂ ಬಗೆಬಗೆ ಪೋಸ್ಟರ್ಗಳನ್ನು ಬಿಡುಗಡೆ ಮಾಡಿಕೊಳ್ಳುವ ಮೂಲಕ ವಿಶ್ ಮಾಡುತ್ತಿವೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ, ರೋಹಿತ್ ಪದಕಿ ಅವರ ರತ್ನನ್ ಪ್ರಪಂಚ, ದುನಿಯಾ ವಿಜಯ್ ನಾಯಕತ್ವದ ಸಲಗ, ಅಶು ಬೆದ್ರ ನಿರ್ಮಾಣ ಮಾಡುತ್ತಿರುವ ಹೆಡ್ ಬುಷ್, ಬಡವ ರಾಸ್ಕಲ್ ಮತ್ತು ಡಾಲಿ ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್ ಮಾಡಿಕೊಂಡು ನೆಚ್ಚಿನ ನಟನ ಜನ್ಮದಿನಕ್ಕೆ ಹಾರೈಸಿವೆ. ಆ ಎಲ್ಲ ಪೋಸ್ಟರ್ಗಳು ಇಲ್ಲಿವೆ.