

ಸಿನಿಮಾ ಕ್ಷೇತ್ರ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಮೈಮಾಟಕ್ಕೆ ಹೆಚ್ಚಿನ ಬೆಲೆ. ಅಂದ ಚೆಂದಕ್ಕೇ ಅಲ್ಲಿ ತೂಕ ಜಾಸ್ತಿ. ಪ್ರತಿಭೆಗೆ ಏನಿದ್ದರೂ ಎರಡನೇ ಸ್ಥಾನ. ಆಗಾಗ ಅಂಥ ಪ್ರಕರಣಗಳು ಸುದ್ದಿ ಮಾಡುತ್ತಲೇ ಇರುತ್ತವೆ. ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಲೇ ಇರುತ್ತದೆ. ಆಗಾಗ ಅಂಥ ಕಾಮಕಾಂಡಗಳು ದೊಡ್ಡವರ ಬುಡಕ್ಕೆ ಬಂದಿದ್ದೂ ಉಂಟು. ಮುಜುಗರಕ್ಕೀಡಾದ ಘಟನೆಯೂ ನಡೆದಿವೆ. ಇತ್ತ ಅವಕಾಶಕ್ಕಾಗಿ, ದುಡ್ಡಿಗಾಗಿ ಸಾಕಷ್ಟು ನಟಿಯರು ಹಾಸಿಗೆ ಹಂಚಿಕೊಂಡ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಅಂಥ ದುರಂತ ಅನುಭವಗಳನ್ನು ಅವರೇ ಹೇಳಿಕೊಂಡಿದ್ದಾರೆ. ಅಂಥಹ ಒಂದಷ್ಟು ಕಾಸ್ಟಿಂಗ್ ಕೌಚ್ ಬಗೆಗಿನ ಮಾಹಿತಿ ಮಾಹಿತಿ ಇಲ್ಲಿದೆ ನೋಡಿ..
ಇದನ್ನೂ ಓದಿ: ಎಸ್.ಪಿ.ಬಿಗೆ ಕರೊನಾ ಹರಡಲು ನಾನಲ್ಲ ಕಾರಣ …
ಇನ್ನು ಬಾಲಿವುಡ್ ಕಾಂಟ್ರವರ್ಸಿ ನಟ ಕಂಗನಾ ರಣಾವತ್ಗೂ ಇಂಥ ಅನುಭವ ಆಗಿತ್ತು. ಆರಂಭದ ದಿನಗಳಲ್ಲಿ ಸಿನಿಮಾ ಅವಕಾಶಗಳಿಲ್ಲದೆ ಪರದಾಡುತ್ತಿದ್ದ ಸಂದರ್ಭದಲ್ಲಿ ಕಂಗನಾ ರಣಾವತ್ ಸಹ ನಿರ್ದೇಶಕರು ನಿರ್ಮಾಪಕರೊಂದಿಗೆ ಮಲಗಿದ್ದೆ ಎಂದು ಬಹಿರಂಗವಾಗಿ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಅದೇ ರೀತಿ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ಹೆಸರು ಮಾಡಿರುವ ತಿಸ್ಕಾ ಚೋಪ್ರಾ, ಪಾಯಲ್ ರೋಹಟ್ಗಿ, ಪ್ರೀತಿ ಜೈನ್, ಶೆರ್ಲಿನ್ ಚೋಪ್ರಾ, ಸರ್ವಿನ್ ಚಾವ್ಲಾ ಸೇರಿ ಬಾಲಿವುಡ್ನ ಘಟಾನುಘಟಿಗಳು ಬಾಲಿವುಡ್ನಲ್ಲಿ ನಿರ್ದೇಶಕರು ನಿರ್ಮಾಪಕರಿಂದ ಹಲವು ಕಹಿ ಅನುಭವಗಳನ್ನು ಉಂಡಿದ್ದಾರೆ. ಹಲವು ಸಂದರ್ಶನಗಳಲ್ಲಿ ಬಹಿರಂಗವಾಗಿಯೂ ಅವುಗಳ ಬಗ್ಗೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)