More

    ಎಸ್.ಪಿ.ಬಿಗೆ ಕರೊನಾ ಹರಡಲು ನಾನಲ್ಲ ಕಾರಣ …

    ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕಳೆದೊಂದು ವಾರದಿಂದ ಅನಾರೋಗ್ಯದಿಂದ ಐಸಿಯುನಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರ ಮಗ ಹೇಳಿದ್ದಾರೆ. ಹೀಗಿರುವಾಗ ಬಾಲಸುಬ್ರಹ್ಮಣ್ಯಂ ಅವರಿಗೆ ಕರೊನಾ ಹೇಗೆ ಹರಡಿತು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.

    ಇದನ್ನೂ ಓದಿ: ಚಂದನ್ ಶೆಟ್ಟಿ ಕಂಠದಲ್ಲಿ ಹೊಸ `ಕೋಲು ಮಂಡೆ’ …

    ಅಷ್ಟೇ ಅಲ್ಲ, ಇದಕ್ಕೆ ಗಾಯಕಿ ಮಾಳವಿಕಾ ಪಂತುಲ ಅವರೇ ಕಾರಣ ಎನ್ನಲಾಗುತ್ತಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕೆಲವು ದಿನಗಳ ಹಿಂದೆ ಮಾಳವಿಕಾ ಮತ್ತು ಇತರರ ಜತೆಗೆ ತೆಲುಗು ಚಾನಲ್‍ವೊಂದರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪರೀಕ್ಷೆ ಮಾಡಿಸಿಕೊಂಡಾಗ, ಪಾಸಿಟಿವ್ ಬಂದಿತ್ತು. ಇನ್ನೊಂದು ಕಡೆ ಮಾಳವಿಕಾ ಅವರಿಗೂ ಕರೊನಾ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದಿದೆ. ಅಷ್ಟೇ ಅಲ್ಲ, ಅವರ ತಂದೆ-ತಾಯಿ ಮತ್ತು ಮಗುವಿಗೂ ಪಾಸಿಟಿವ್ ಎಂದು ಹೇಳಲಾಗುತ್ತಿದೆ.

    ಹಾಗಾಗಿ, ಮಾಳವಿಕಾ ಅವರಿಂದಲೇ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೂ ಕರೊನಾ ಪಾಸಿಟಿವ್ ಉಂಟಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಇದೀಗ ಮಾಳವಿಕಾ ಅವರೇ ಇದೆಲ್ಲಾ ವದಂತಿ ಎಂದು ಹೇಳಿದ್ದಾರೆ. ಯಾವಾಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಪಾಸಿಟಿವ್ ಆಗಿರುವುದು ಗೊತ್ತಾಯಿತೋ, ಆಗ ಮಾಳವಿಕಾ ಸಹ ಪರೀಕ್ಷೆ ಮಾಡಿಸಿಕೊಂಡರಂತೆ. ಆಗ ಪಾಸಿಟಿವ್ ಇರುವುದು ಗೊತ್ತಾಯಿತು ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ತಮ್ಮಿಂದ ಅವರಿಗೆ ಕರೊನಾ ಹರಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಎಸ್.ಪಿ.ಬಿ ಮತ್ತು ತಮಗಲ್ಲದೆ ಸುನೀಲ ಎಂಬ ಗಾಯಕಿಗೂ ಕರೊನಾ ಪಾಸಿಟಿವ್ ಆಗಿರುವ ವಿಷಯವನ್ನು ಅವರು ಬಹಿರಂಗಗೊಳಿಸಿದ್ದಾರೆ.

    ಇದನ್ನೂ ಓದಿ: ಜ್ಯೋತಿಕಾ ಆಯ್ತು; ಈಗ ಸೂರ್ಯ ಸಿನಿಮಾ ಸಹ ಓಟಿಟಿಯಲ್ಲಿ …

    ಇನ್ನು ತಮ್ಮ ವಿರುದ್ಧ ಸುಳ್ಳುಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಸೈಬರ್ ಕ್ರೈಮ್‍ಗೆ ದೂರು ಅವರು ದೂರು ಕೊಟ್ಟಿದ್ದಾರಂತೆ.

    ಓಟಿಟಿಯಲ್ಲೇ ಬಿಡುಗಡೆಯಾಗುತ್ತಾ `ಸೂರ್ಯವಂಶಿ’ ಮತ್ತು `83′?

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts