More

    ಕನಸು ನನಸಾಗಿಸಿಕೊಳ್ಳಲು ಸುಶಾಂತ್​ ಏನು ಮಾಡಿದ್ದರು ಗೊತ್ತಾ?

    ಸುಶಾಂತ್​ ಸಿಂಗ್​ ರಜಪೂತ್​ ಬರೀ ಒಬ್ಬ ಸಿನಿಮಾ ನಟನಷ್ಟೇ ಅಲ್ಲ, ಬೇರೆಬೇರೆ ಕ್ಷೇತ್ರಗಳಲ್ಲೂ ಆಸಕ್ತಿ ಇಟ್ಟುಕೊಂಡಿದ್ದು ಗೊತ್ತೇ ಇದೆ. ಅಷ್ಟೇ ಅಲ್ಲ, ಭವಿಷದಲ್ಲಿ ಅದು ಮಾಡಬೇಕು, ಇದು ಸಾಧಿಸಬೇಕು ಎಂದು ಕನಸು ಕಟ್ಟಿಕೊಂಡಿದ್ದರ ಬಗ್ಗೆ ಸಹ ಸಾಕಷ್ಟು ಚರ್ಚೆಯಾಗಿದೆ.

    ಈ ಮಧ್ಯೆ, ಸುಶಾಂತ್​ ಕುರಿತು ಇನ್ನೊಂದು ಸುದ್ದಿ ಬಂದಿದೆ. ಅದೇನೆಂದರೆ, ಅವರು ತಮ್ಮ ಕನಸುಗಳನ್ನು ನನಸಿಕೊಳ್ಳುವುದಕ್ಕೆಂದೇ ಒಂದು ವಿಶೇಷ ತಂಡ ಕಟ್ಟಿಕೊಂಡಿದ್ದರಂತೆ. ಹಾಗಂತ ಅವರ ಸ್ನೇಹಿತ ಮತ್ತು ಆ ತಂಡದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಸ್ಯಾಮ್ಯುಯಲ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಮತ್ತೆ ವೀರಪ್ಪನ್ ಆದ ಕಿಶೋರ್​ … ವೆಬ್​ಸೀರೀಸ್​ಗೆ ಚಾಲನೆ

    ವಿಷಯ ಏನೆಂದರೆ, ಸುಶಾಂತ್​ಗೆ ಏನೇನೋ ಸಾಧಿಸಬೇಕು ಎಂಬ ಆಸೆ ಇತ್ತು. ಅದಕ್ಕೆ ಹಲವರು ಸಹಾಯದ ಅವಶ್ಯಕತೆ ಇತ್ತು. ತಮ್ಮ ಹಣಕಾಸಿನ ವ್ಯವಹಾರ ನೋಡಿಕೊಳ್ಳುವವರು, ಲಾ ಗೊತ್ತಿರುವವರು, ವಿಜ್ನಾನ-ತಂತ್ರಜ್ನಾನದ ಬಗ್ಗೆ ಅರಿವಿರುವವರು … ಹೀಗೆ ಹಲವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದರಂತೆ. ಅವರೆಲ್ಲರ ಸಹಾಯ ಪಡೆದು, ಏನೋ ಸಾಧನೆ ಮಾಡಬೇಕೆಂದು ಹೊರಟಿದ್ದರಂತೆ.

    ಈ ಕುರಿತು ಸ್ವತಃ ಸ್ಯಾಮ್ಯುಯಲ್​ ಹೇಳಿಕೊಂಡಿದ್ದಾರೆ. ಅವರಿಗೆ ನ್ಯಾಯಾಂಗದ ಬಗ್ಗೆ ಒಂದಿಷ್ಟು ಜ್ನಾನ ಇದ್ದಿದ್ದರಿಂದ, ಸುಶಾಂತ್​ ತಮ್ಮ ಜತೆಗೆ ಇಟ್ಟುಕೊಂಡಿದ್ದಾರೆ. ಸುಮಾರು ಒಂದು ವರ್ಷ ಕಾಲ ಸುಶಾಂತ್​ ಜತೆಗೆ ಅವರ ಮನೆಯಲ್ಲೇ ಇದ್ದ ಸ್ಯಾಮ್ಯುಯಲ್​, ಜುಲೈ 2019ಕ್ಕೆ ದೆಹಲಿಯಲ್ಲಿ ಕೆಲಸ ಸಿಕ್ಕಿತು ಎಂಬ ಕಾರಣಕ್ಕೆ ಬಿಟ್ಟು ಹೋದರಂತೆ.

    ಇದನ್ನೂ ಓದಿ: ಸುಶಾಂತ್​ ಕೊಂದಿದ್ದು ಯಾರು ಗೊತ್ತಾ? ಚೇತನ್​ ಭಗತ್​ ಹೇಳ್ತಾರೆ ಕೇಳಿ …

    ಆರಂಭದಲ್ಲಿ ಸುಶಾಂತ್​ ಅವರ ಕಾಂಟ್ರಾಕ್ಟ್​ಗಳು, ಮನೆಯ ಅಗ್ರೀಮೆಂಟ್​ಗಳು, ನಿರ್ಮಾಪಕರು ಮತ್ತು ಬ್ರಾಂಡ್​ಗಳ ಜತೆ ಮಾತುಕತೆ ಮುಂತಾದ ವಿಷಯಗಳನ್ನು ಸ್ಯಾಮ್ಯುಯಲ್​ ನೋಡಿಕೊಳ್ಳುತ್ತಿದ್ದರಂತೆ.

    ಸ್ಯಾಮ್ಯುಯಲ್​ ಅಲ್ಲದೆ ಕುಶಾಲ್​ ಜವೇರಿ, ಸಿದ್ಧಾರ್ಥ್​ ಗುಪ್ತಾ, ಅಬ್ಬಾಸ್​ ಮುಂತಾದವರು ಈ ತಂಡದಲ್ಲಿದ್ದು, ಒಬ್ಬೊಬ್ಬರು ಒಂದೊಂದು ಕೆಲಸ ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗದೆ.

    ಚಿರಂಜೀವಿ ಮನೆಗೆ ಬಂತು ಕಟ್ಟಿಗೆಯ ಬೈಕ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts