More

    ಸುಶಾಂತ್​ ಬದುಕಿದ್ದರೆ ಈ ಸರ್ಕಸ್​ ನೋಡಿ ನಗುತ್ತಿದ್ದರು: ಸೋನು

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ನಿಧನರಾಗಿ ಮೂರು ತಿಂಗಳಾಗಿವೆ. ಈ ಮೂರು ತಿಂಗಳಲ್ಲಿ ಅವರ ಹೆಸರಿನಲ್ಲೇ ಏನೇನೋ ಬೆಳವಣಿಗೆಗಳಾಗಿವೆ. ಬಹುಶಃ ಅವರು ಬದುಕಿದ್ದರೆ, ಈ ಎಲ್ಲಾ ಸರ್ಕಸ್​ ನೋಡಿ ಅವರು ಖಂಡಿತಾ ನಗುತ್ತಿದ್ದರು ಎಂದು ಸೋನು ಸೂದ್​ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: FIRST LOOK: ‘ಸತ್ಯಮೇವ ಜಯತೇ 2’ ಚಿತ್ರಕ್ಕಾಗಿ ದೇಹದ ಆಕಾರವನ್ನೇ ಬದಲಿಸಿದ ಜಾನ್ ಅಬ್ರಹಂ!

    ಸುಶಾಂತ್​ ಸಾವಿನ ಬಗ್ಗೆ ಸೋನು ಮಾತನಾಡುತ್ತಿರುವುದು ಇದು ಮೊದಲೇನಲ್ಲ. ಎರಡು ತಿಂಗಳುಗಳ ಹಿಂದೆ ಅವರು ಮೊದಲ ಬಾರಿಗೆ ಮಾತನಾಡಿದ್ದರು. ಸುಶಾಂತ್​ ಹೆಸರು ಬಳಸಿಕೊಂಡು ಬೇರೆಯವರು ಹೆಸರು ಮಾಡುತ್ತಿದ್ದಾರೆ ಎಂದು ಕಂಗನಾ ರಣಾವತ್​ ಹೆಸರು ತೆಗೆದುಕೊಳ್ಳದೆಯೇ ಹೇಳಿದ್ದರು.

    ಈಗ ಸೋನು, ಮತ್ತೊಮ್ಮೆ ಸುಶಾಂತ್​ ಸಿಂಗ್​ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಸಂದರ್ಶನ ನೀಡಿರುವ ಅವರು, ಸುಶಾಂತ್​ ಬಗ್ಗೆ ಗೊತ್ತಿಲ್ಲದವರು, ಅವರನ್ನು ಜೀವನದಲ್ಲಿ ಒಮ್ಮೆ ಸಹ ನೋಡದಿರುವವರೆಲ್ಲಾ ಅವರ ಪರವಾಗಿ ಮಾತನಾಡುತ್ತಿರುವುದು ನೋಡಿ ತಮಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.

    ‘ಎಷ್ಟೋ ಜನ ಪಬ್ಲಿಸಿಟಿಗಾಗಿ ಸುಶಾಂತ್​ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಸುಶಾಂತ್​ ಬಗ್ಗೆ ಗೊತ್ತಿಲ್ಲದವರೆಲ್ಲಾ, ಅವರ ಪರವಾಗಿ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬಹುಶಃ ಸುಶಾಂತ್​ ಬದುಕಿದ್ದರೆ, ತಮ್ಮ ಹೆಸರಿನಲ್ಲಿ ಆಗುತ್ತಿರುವ ಇಷ್ಟೆಲ್ಲಾ ಸರ್ಕಸ್​ ನೋಡಿ ಖಂಡಿತಾ ನಗುತ್ತಿದ್ದರು’ ಎಂದು ಸೋನು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: VIDEO: ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಇವ್ರು ಶಾಹಿದ್​ ಕಪೂರೇ!; ಏನೋ ಮಾಡಲು ಹೋಗಿ…

    ಇನ್ನು ತಮ್ಮ ಹಾಗೂ ಸುಶಾಂತ್ ಗೆಳೆತನದ ಬಗ್ಗೆ ಮಾತನಾಡಿರುವ ಅವರು, ‘ನಾನು ಮತ್ತು ಸುಶಾಂತ್​ ಹಲವು ಬಾರಿ ಭೇಟಿಯಾಗಿದ್ದೇವೆ. ಜಿಮ್​ನಲ್ಲಿ ಒಟ್ಟಿಗೇ ವರ್ಕೌಟ್​ ಮಾಡಿದ್ದೇವೆ. ಸುಶಾಂತ್​ ಹೊರಗಿನವರಾದರೂ, ಇಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು. ಆದರೆ, ಬೇರೆಲ್ಲಾ ವಿಚಾರಗಳ ಮಧ್ಯೆ ಅವೆಲ್ಲಾ ಮರೆತುಹೋಗುವುದಕ್ಕೆ ಪ್ರಾರಂಭವಾಗಿದೆ. ಇದೆಲ್ಲಾ ನೋಡುತ್ತಿದ್ದರೆ ನಿಜಕ್ಕೂ ಬೇಸರವಾಗುತ್ತದೆ’ ಎಂದು ಸೋನು ಹೇಳಿಕೊಂಡಿದ್ದಾರೆ.

    ಶೂಟಿಂಗ್​ ಸೆಟ್​ನಲ್ಲಿ ನಟ, ನಿರ್ದೇಶಕರ ಪಾಲಿಗೆ ನಾವು ಅವರ ಹೆಂಡ್ತಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts