

ಮುಂಬೈ: ಬಾಲಿವುಡ್ನ ಹ್ಯಾಂಡ್ಸಮ್ ನಟ ಜಾನ್ ಅಬ್ರಹಂ, ಸಿನಿಮಾ ಸಲುವಾಗಿ ಬೇರೆ ಬೇರೆ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಡೀ ದೇಹವನ್ನೇ ಹುರಿಗೊಳಿಸಿಕೊಂಡು, ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಾರೆ. ಅವರ ಬಹುತೇಕ ಸಿನಿಮಾಗಳನ್ನು ನೋಡಿದರೆ ಅಲ್ಲಿ ಅವರ ಅತ್ಯಾಕರ್ಷಕ ಬಾಡಿಯೇ ಹೈಲೈಟ್. ಇದೀಗ ಆ ಪ್ರಕ್ರಿಯೆ ಸತ್ಯಮೇವ ಜಯತೇ 2 ಚಿತ್ರದಲ್ಲೂ ಮುಂದುವರಿದಿದೆ.
ಇದನ್ನೂ ಓದಿ: ‘ಗಿರಿಕಥೆಯ ಸುಂದರಿಯರು’
2018ರಲ್ಲಿ ಸತ್ಯ ಮೇವ ಜಯತೇ ಸಿನಿಮಾ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿತ್ತು. ಇದೀಗ ಅದೇ ಚಿತ್ರದ ಮುಂದುವರಿದ ಭಾಗ ತಯಾರಾಗುತ್ತಿದೆ. ಸತ್ಯಮೇವ ಜಯತೇ 2 ಚಿತ್ರದ ಮೊದಲ ಪೋಸ್ಟರ್ ಅನ್ನು ನಟ ಜಾನ್ ಅಬ್ರಹಂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬಿಡುಗಡೆ ದಿನಾಂಕವನ್ನೂ ಘೋಷಿಸಿಕೊಂಡಿದ್ದಾರೆ.
ಮೊದಲ ಭಾಗವನ್ನು ನಿರ್ದೇಶನ ಮಾಡಿದ್ದ ಮಿಲಾಪ್ ಮಿಲನ್ ಜವೇರಿ ಎರಡನೇ ಭಾಗಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದು, 2021ರ ಮೇ12ಕ್ಕೆ ಈದ್ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ. ಸದ್ಯ ಫಸ್ಟ್ಲುಕ್ನಲ್ಲಿ ಜಾನ್ ಅಬ್ರಹಂ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಕಣಕಣದ ರಕ್ತದ ಅಣುವಿನಲ್ಲೂ ಭಾರತ ಎಂಬರ್ಥದಲ್ಲಿ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. (ಏಜೆನ್ಸೀಸ್)