'ಗಿರಿಕಥೆಯ ಸುಂದರಿಯರು'

Cinema
Published on

ಬೆಂಗಳೂರು: ಶೀರ್ಷಿಕೆ ಮೂಲಕವೇ ಕುತೂಹಲ ಕೆರಳಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ, ಇದೀಗ ನಾಯಕಿಯರನ್ನು ಆಯ್ದುಕೊಂಡಿದೆ. ಒಬ್ಬರನ್ನಲ್ಲ ಇಬ್ಬರು!

ಹೌದು, ಈ ಸಿನಿಮಾದಲ್ಲಿ ಹರಿ ಮತ್ತು ಗಿರಿ ಇಬ್ಬರ ಕಥೆ ಸಾಗುವುದರಿಂದ ಇಬ್ಬರು ನಟಿಯರು ಚಿತ್ರತಂಡ ಸೇರಿಕೊಂಡಿದ್ದಾರೆ. ‘ಲವ್ ಮಾಕ್​ಟೇಲ್’ ಸಿನಿಮಾ ಖ್ಯಾತಿಯ ರಚನಾ ಇಂದರ್ ಮತ್ತು ತಪಸ್ವಿನಿ ಪೂಣಚ್ಚ ನಾಯಕಿ ಯರಾಗಿದ್ದಾರೆ. ಗಿರಿಕೃಷ್ಣ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಗಿರಿಕೃಷ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇನ್ನೇನು ಮುಂದಿನ ವಾರ ಚಿತ್ರೀಕರಣಕ್ಕೂ ತಂಡ ಪ್ಲಾನ್ ಮಾಡಿಕೊಂಡಿದೆ. ‘ಸದ್ಯಕ್ಕೆ ನಾಯಕಿಯರ ಆಯ್ಕೆ ವಿಚಾರ ಬಹಿರಂಗ ಪಡಿಸಿದ್ದೇವೆ. ವರ್ಕ್​ಶಾಪ್ ಸಹ ನಡೆದಿದ್ದು, ಮಾಸಾಂತ್ಯಕ್ಕೆ ಬೆಂಗಳೂರಿನಲ್ಲಿಯೇ ಶೂಟಿಂಗ್ ಆರಂಭವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ. ಸಂದೇಶ್ ನಾಗರಾಜ್ ಮತ್ತು ರಿಷಬ್ ಶೆಟ್ಟಿ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ. ರಂಗನಾಥ್ ಸಿಎಂ ಛಾಯಾ ಗ್ರಾಹಕರಾಗಿ ದ್ದಾರೆ. ಒಟ್ಟು 45 ದಿನಗಳಲ್ಲಿ ಚಿತ್ರವನ್ನು ಮುಗಿಸಿ ಕೊಳ್ಳುವುದು ತಂಡದ ಯೋಜನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net