

ಹೆಬ್ರಿ: ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಗ್ರಾಮದ ಮಕ್ಕಳ ಶ್ರೇಯಸ್ಸಿಗೆ, ಆರೋಗ್ಯಕ್ಕೆ ಹಾಗೂ ವಿದ್ಯೆಗಾಗಿ ಶ್ರೀ ಅನಂತಪದ್ಮನಾಭನಲ್ಲಿ ಇತ್ತೀಚೆಗೆ ಅರ್ಚಕ ವಿದ್ವಾನ್ ಪದ್ಮನಾಭ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ಮಕ್ಕಳಿಂದ ಭಜನಾ ಕೀರ್ತನೆ ಹಾಗೂ ಸ್ವಾಮಿಗೆ ಸೋಣಾರ್ತಿ ಸೇವೆ ಕಾರ್ಯಕ್ರಮ ನಡೆಯಿತು.