

ಕಾರ್ಕಳ: ಉಡುಪಿ ಜಿಲ್ಲಾ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲಾ ಸಂಘಟನೆ ಐಕ್ಸ್ ಆಲ್ ಇಂಡಿಯಾ ಕೌನ್ಸಿಲ್ ಆಫ್ ಸ್ಪೋರ್ಟ್ಸ್ ವತಿಯಿಂದ ಉಡುಪಿ ಸೇಂಟ್ ಸಿಸಿಲಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಥ್ರೋಬಾಲ್ ಟೂರ್ನಿಯಲ್ಲಿ ಪಾಜಕ ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದಾರೆ.
17 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಥಮ, 14 ವರ್ಷ ಬಾಲಕರ ವಿಭಾಗದಲ್ಲಿ ದ್ವಿತೀಯ, ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ಸಮಗ್ರ ಚಾಂಪಿಯನ್ ಸ್ಥಾನ ಪಡೆದಿದ್ದಾರೆ. 17 ವರ್ಷ ವಯೋಮಾನದಲ್ಲಿ ಬೆಸ್ಟ್ ರಿಸೀವರ್ ಆಗಿ ಸಂಗಮೇಶ್, ಬೆಸ್ಟ್ ಸರ್ವರ್ ಅನಿರುದ್ಧ ಜೋಷಿ, 14 ವರ್ಷದ ವಯೋಮಾನದಲ್ಲಿ ಬಾಲಕರ ವಿಭಾಗದಲ್ಲಿ ಆಲ್‌ರೌಂಡರ್ ಅನೀಶ್, ಬಾಲಕಿಯರ ವಿಭಾಗದಲ್ಲಿ ಧನುಶ್ರೀ ವೈಯಕ್ತಿಕ ಪ್ರಶಸ್ತಿ ಪಡದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಕಲ್ಮೇಶ್, ಸುಮನಾ, ಸಚಿನ್, ಮಮತಾ, ದುರ್ಗಪ್ಪ ಹಾಗೂ ವಿದ್ಯಾಲಯ ಪ್ರಿನ್ಸಿಪಲ್ ಡಾ.ಗೀತಾ ಶಶಿದರ್ ಹಾಗೂ ಕ್ರೀಡೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.