

ಪಡುಬಿದ್ರಿ: ಅಧಿಕಾರ ಇದ್ದಾಗ ಜನಪರ ಕಾರ್ಯ ಮಾಡಿ, ಸಮಸ್ಯೆಗಳಿಂದ ಬರುವ ಜನರಿಗೆ ಉತ್ತಮ ಸೇವೆ ಸಾಂತ್ವನ ಕೊಡುವ ಕೆಲಸ ಗ್ರಾಪಂನಿಂದಾಗಬೇಕು. 34 ಸದಸ್ಯ ಬಲದ ಜಿಲ್ಲೆಯ ದೊಡ್ಡ ಗ್ರಾಪಂ ಆಗಿರುವ ಪಡುಬಿದ್ರಿಗೆ ಪುರಸಭೆ ಆಗುವ ಅವಕಾಶವೂ ಇದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
54 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಪಡುಬಿದ್ರಿ ಗ್ರಾಪಂ ಸಭಾಭವನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ, ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಪಿಡಿಒ ಮಂಜುನಾಥ್ ಪಿ.ಶೆಟ್ಟಿ, ಕಾರ್ಯದರ್ಶಿ ರೂಪಲತಾ, ಗ್ರಾಮ ಆಡಳಿತ ಅಧಿಕಾರಿ ಮಥಾಯಿ, ಗ್ರಾಪಂ ನಿಕಟಪೂರ್ವ ಅಧ್ಯಕ್ಷ, ಉಪಾಧ್ಯಕ್ಷರಾದ ರವಿ ಶೆಟ್ಟಿ, ಯಶೋದಾ ಹಾಗೂ ಗುತ್ತಿಗೆದಾರ ಅಬ್ದುಲ್ಲ ಅವರನ್ನು ಸನ್ಮಾನಿಸಲಾಯಿತು. ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಎನ್.ಶೆಟ್ಟಿ ವಂದಿಸಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ 35 ಕೋಟಿ ರೂ.ಅನುದಾನದಿಂದ ವಿವಿಧ ಅಭಿವೃದ್ಧಿ ಯೋಜನೆ ಅನುಷ್ಠಾನಿಸಲಾಗಿದೆ.-ಲಾಲಾಜಿ ಆರ್.ಮೆಂಡನ್ ಮಾಜಿ ಶಾಸಕ