ನೋಡಲು ಟಿವಿಯಿದೆ! ಆದ್ರೆ, ಮಾತಾಡಲು ಕುಟುಂಬಸ್ಥರಿಲ್ಲ; ಜೈಲಿನಲ್ಲಿ 1 ತಿಂಗಳು ಕಳೆದ ಸೋನಮ್​ | Sonam

ವಿಜಯವಾಣಿ (50)
Published on

Sonam Raghuvanshi: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಸೋನಮ್ ರಘುವಂಶಿ​ ಮತ್ತು ಆಕೆಯ ಪ್ರಿಯಕರ ಎ2 ಆರೋಪಿ ಸದ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಷಯ. ಪ್ರಸ್ತುತ, ಶಿಲ್ಲಾಂಗ್ ಜೈಲಿನಲ್ಲಿರುವ ಸೋನಮ್​, ಇದೀಗ ಒಂದು ತಿಂಗಳು ಸೆರೆಮನೆ ವಾಸಕ್ಕೆ ತತ್ತರಿಸಿದ್ದಾಳೆ.

ಪ್ರಿಯಕರ ರಾಜ್​ ಕುಶ್ವಾ ಜೊತೆಗಿನ ಕಾಮದಾಟಕ್ಕೆ ಅಡ್ಡಿಯಾಗಿದ್ದ ಪತಿ ರಾಜಾ ರಘುವಂಶಿಗೆ ಹನಿಮೂನ್​ ನೆಪದಲ್ಲಿ ಗುಂಡಿ ತೋಡಿದ ಸೋನಮ್​ ಸದ್ಯ ಜೈಲಿನ ಕತ್ತಲೆ ಕೋಣೆಯಲ್ಲಿ ನರಳಾಟ ಅನುಭವಿಸುತ್ತಿದ್ದಾಳೆ. ಇದಕ್ಕೆ ಆಕೆಯ ಕುಟುಂಬಸ್ಥರೇ ಜ್ವಲಂತ ಸಾಕ್ಷಿ. ಪ್ರಕರಣ ನಡೆದ ದಿನದಿಂದ ಇಲ್ಲಿಯವರೆಗೆ ಸೋನಮ್ ನೋಡಲು ಆಕೆಯ ಕುಟುಂಬಸ್ಥರು ಆಗಮಿಸಿಲ್ಲ. ಸೋನಮ್​ ಕುಟುಂಬದವರು ಮಾತ್ರವಲ್ಲದೇ ಆರೋಪಿಗೆ ಸಂಬಂಧಪಟ್ಟಂತೆ ಯಾರೊಬ್ಬರೂ ಸೋನಮ್ ಭೇಟಿಯಾಗಲು ಬಂದಿಲ್ಲ.

ವರದಿಗಳ ಪ್ರಕಾರ, ಜೈಲಿನ ವಾಸಕ್ಕೆ ಒಗ್ಗಿಕೊಂಡಿರುವ ಸೋನಮ್​, ಇತರ ಮಹಿಳಾ ಕೈದಿಗಳಂತೆಯೇ ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದೇಳುತ್ತಾಳೆ. ಜೈಲಿನ ಮಾರ್ಗಸೂಚಿಗಳನ್ನು ನಿಗದಿಪಡಿಸಿರುವ ಸಮಯಕ್ಕೆ ಅನುಗುಣವಾಗಿ ಅನುಸರಿಸುತ್ತಿದ್ದಾಳೆ. ತನ್ನೊಂದಿಗೆ ಜೈಲಿನಲ್ಲಿರುವ ಮಹಿಳಾ ಕೈದಿಗಳೊಡನೆ ಅಥವಾ ಜೈಲಧಿಕಾರಿಗಳ ಜೊತೆಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಮ್ ಏನ್ನನ್ನು ಮಾತನಾಡಿಲ್ಲ ಎನ್ನಲಾಗಿದೆ. ​

ಸೋನಮ್​ ಇರುವ ಕೋಣೆಯಲ್ಲಿ ನೋಡಲು ಟಿವಿ ವ್ಯವಸ್ಥೆಯಿದೆ. ಇಲ್ಲಿಯವರೆಗೆ ಆಕೆಗೆ ಯಾವುದೇ ವಿಶೇಷ ಕೆಲಸವನ್ನೂ ನಿಯೋಜಿಸಿಲ್ಲ. ಮೂಲಗಳ ಪ್ರಕಾರ, ಆಕೆಗೆ ಹೊಲಿಗೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳನ್ನು ಕಲಿಸಲು ಜೈಲಧಿಕಾರಿಗಳು ಚರ್ಚಿಸಿದ್ದಾರೆ ಎನ್ನಲಾಗಿದೆ. ಜೈಲಿನ ನಿಯಮ ಅನುಸಾರ, ಸೋನಮ್​ ತನ್ನ ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶವಿದೆ. ಆದ್ರೆ, ಇದುವರೆಗೆ ಯಾರೂ ಸಹ ಆಕೆಯನ್ನು ನೋಡುವ ಮನಸ್ಸು ಮಾಡಿಲ್ಲ.

ಏನಿದು ಪ್ರಕರಣ?

ಮೇ.23ರಂದು ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಸಲುವಾಗಿ ಪ್ರಯಾಣಿಸಿದ್ದ ಇಂದೋರ್​ನ ದಂಪತಿ ಕಾಣೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿತ್ತು. ದಂಪತಿಯ ಪೈಕಿ ಮೊದಲು ರಾಜು ಮೃತದೇಹ ಝರಿ ನಡುವೆ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಜೂ. 02ರಂದು ಸಿಕ್ಕಿತು. ಈ ಕೇಸ್​ನಲ್ಲಿ ಕಾಣೆಯಾಗಿದ್ದ ಪತ್ನಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯೇ ಕೊಲೆಗಾತಿ ಎಂಬುದು ಮೂವರ ಬಂಧನದ ಬಳಿಕ ಸ್ಪಷ್ಟವಾಯಿತು. ಕೊಲೆ ಪ್ರಕರಣದಲ್ಲಿ ಸೋನಮ್​ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾ​ ಸೇರಿದಂತೆ ಒಟ್ಟು ಐವರನ್ನು ಖಾಕಿ ಬಂಧಿಸಿ, ತನಿಖೆಗೆ ಒಳಪಡಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net