ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಂದ ಪತ್ನಿ; ಮುಂಬೈನಲ್ಲೊಂದು ಮನಕಲುಕುವ ಸ್ಟೋರಿ..!Murder

Murder
Published on

Murder: ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಂದು ಅಪರಾಧವನ್ನು ಮುಚ್ಚಿಹಾಕಲು ಶವವನ್ನು ಮನೆಯಲ್ಲೇ ಹೂತು ಹಾಕಿರುವ ಭಯಾಯನಕ ಕೃತ್ಯವೊಂದು ಮುಂಬೈನ ನಲಸೋಪರದಲ್ಲಿ ನಡೆದಿದೆ.

ಆರೋಪಿ ಮಹಿಳೆ ಸುಮಾರು 15 ದಿನಗಳ ಹಿಂದೆ ತನ್ನ ಗಂಡನನ್ನು ಕೊಂದು ಆತನ ದೇಹವನ್ನು ತಮ್ಮ ಕೋಣೆಯ ನೆಲದ ಕೆಳಗೆ ಹೂತು ಹಾಕಿ, ತನ್ನ ಮೈದುನನ (ಪತಿಯ ಸಹೋದರ) ಹತ್ತಿರವೇ ಟೈಲ್ಸ್​ ಹಾಕಿಸಿ, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾಳೆ.

2 ದಿನಗಳ ಹಿಂದೆ ಪತಿಯ ನಾಪತ್ತೆಯ ಬಗ್ಗೆ ಹಲವಾರು ಅನುಮಾನ ಹುಟ್ಟಿಕೊಂಡ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆಹಾಕಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಈ ಘಟನೆಯನ್ನು ಬಯಲಿಗೆಳೆದಿದ್ದಾರೆ.

ಪೊಲೀಸರು ತನಿಖೆ ಆರಂಭಿಸಿರುವ ಮಾಹಿತಿ ತಿಳಿದ ಪತ್ನಿ ಹಾಗೂ ಆಕೆಯ ಪ್ರಿಯಕರ ಸ್ಥಳದಿಂದ ನಾಪತ್ತೆಯಾಗಿದ್ದು, ಅವರನ್ನು ಸೆರೆ ಹಿಡಿಯುಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net