ಸೋನಂ ಕಪೂರ್​ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ ಕಳ್ಳರು ಸಿಕ್ಕಿಬಿದ್ರು!

Sonam Kapoor
Published on

ಹೊಸದಿಲ್ಲಿ: ಬಾಲಿವುಡ್​ ನಟಿ ಸೋನಂ ಕಪೂರ್​ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳರನ್ನು ಪತ್ತೆ ಹಚ್ಚಲಾಗಿದೆ. ಫೆಬ್ರವರಿಯಲ್ಲಿ ದಿಲ್ಲಿ ನಿವಾಸದ ಮನೆಯಲ್ಲಿ 2.4ಕೋಟಿ ರೂ. ಬೆಲೆಯ ಚಿನ್ನಾಭರಣ ಕಳ್ಳತನವಾಗಿತ್ತು. ಇದು ಭಾರೀ ಸುದ್ದಿಯಾಗಿತ್ತು.

ಚಿನ್ನಾಭರಣ ಕದ್ದಿದ್ದ ಕಳ್ಳಿ ಬೇರಾರೂ ಅಲ್ಲ, ಸೋನಂ ಕಪೂರ್​ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ನರ್ಸ್​  ಅಪರ್ಣ ರೌತ್​ ವಿಲ್ಸನ್​ ಎಂಬುವಳೇ ಆಗಿದ್ದು, ತನ್ನ ಪತಿ ನರೇಶ್​ ಕುಮಾರ್​​ ಸಾಗರ್​ ಜತೆ ಸೇರಿ ಕಳ್ಳತನ ಮಾಡಿದ್ದಾಳೆ. ಈತ ಸಹಕಾರ್​ಪುರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಇಬ್ಬರು ಸೇರಿ ಫೆ.11ರಂದು ಚಿನ್ನಾಭರಣ ಕದ್ದಿದ್ದರು.ಫೆ.23ರಂದು ತುಘಲಕ್​ ರಸ್ತೆಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.ನಟಿ ಸೋನಂಕಪೂರ್​ ಹಾಗೂ ಆನಂದ್ ಅಹುಜಾ ಮನೆಯಲ್ಲಿ 20 ಜನರು ಕೆಲಸಗಾರರಿದ್ದಾರೆ ಎಲ್ಲರನ್ನೂ ವಿಚಾರಿಸಲಾಗಿತ್ತು ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net