ಚಿಕ್ಕಮಗಳೂರಲ್ಲಿ ಕೆಜಿಎಫ್​-2 ಬಿಡುಗಡೆ ಯಾಕಿಲ್ಲವೆಂದು ಅಭಿಮಾನಿಗಳಿಂದ ಪ್ರತಿಭಟನೆ

KGF
Published on

ಚಿಕ್ಕಮಗಳೂರು: ನಾಳೆ ರಾಜ್ಯಾದ್ಯಂತ ಬಹುನಿರೀಕ್ಷಿತ ಕೆಜಿಎಫ್ 2 ಬಿಡುಗಡೆಯಾಗುತ್ತಿದ್ದರೂ ಚಿಕ್ಕಮಗಳೂರು ನಗರದಲ್ಲಿ ಬಿಡುಗಡೆಯಾಗುತ್ತಿಲ್ಲವಾದ್ದರಿಂದ ಯಶ್​ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ನಗರದ ಎಂಎನ್​ಸಿ ಸರ್ಕಲ್​ ನಲ್ಲಿರುವ ನಾಗಲಕ್ಷ್ಮಿ ಥಿಯೇಟರ್​ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಥಿಯೇಟರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಶಾಸಕ ಸಿ.ಟಿ.ರವಿ ನಟ ಯಶ್​ ಹಾಗೂ ವಿತರಕರ ಜತೆ ಮಾಡನಾಡುವ ಭರವಸೆ ನೀಡಿದರು. ಯಶ್​ ನಟನೆಯ ಸಿನಿಮಾವನ್ನು ಮೊದಲ ದಿನವೇ ನೋಡಬೇಕು ಹಾಗಾಗಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದ  ಅಭಿಮಾನಿಗಳನ್ನು ಮನವೊಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net