ಕೊನೆಗೂ ರಣಬೀರ್​ -ಆಲಿಯಾ ಮದುವೆ ಡೇಟ್​ ಫಿಕ್ಸ್​​

ranbir-Aliya
Published on

ಮುಂಬೈ: ರಣಬೀರ್​ ಹಾಗೂ ಆಲಿಯಾ ಭಟ್​ ವಿವಾಹ ದಿನಾಂಕ ಬದಲಿಸಿದ್ದೇವೆ ಎಂದಿದ್ದ ಕುಟುಂಬ ಇದೀಗ ಕೊನೆಗೂ ದಿನಾಂಕವನ್ನು ಅಧಿಕೃತಗೊಳಿಸಿದೆ ಎನ್ನಲಾಗಿದೆ.

ಏ.14ರಂದೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಬುಧವಾರವ ಮಧ್ಯಾಹ್ನದಿಂದಲೇ ಮೆಹೆಂದಿ ಶಾಸ್ತ್ರ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.ವಿವಾಹ ಕುರಿತು ಭಾರಿ ಸುದ್ದಿಯಾದ ಹಿನ್ನಲೆಯಲ್ಲಿ ತೀರಾ ಖಾಸಗಿಯಾಗಿಡಲು ಕೇವಲ ಕುಟುಂಬಸ್ಥರು ಹಾಗೂ ಬಾಲಿವುಡ್​ನ ಅತ್ಯಾಪ್ತರನ್ನಷ್ಟೇ ಕರೆಯಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕಾಗಿ ರಣಬೀರ್ ಕಪೂರ್​ ಅವರ ವಾಸ್ತು ಹಾಗೂ ಕೃಷ್ಣರಾಜ್​ಕುಮಾರ್ ನಿವಾಸ ವಿವಿಧ ಹೂವು ಹಾಗೂ ಲೈಟ್​ಗಳಿಂದ ಕಂಗೊಳಿಸುತ್ತಿದೆ. ಈ ಹಿಂದೆ ಏಪ್ರಿಲ್​ 14 ರಂದೇ ವಿವಾಹ ನಡೆಯಲಿದ ಎಂದು ಹೇಳಲಾಗಿತ್ತು, ಆದರೆ ಸೋಮವಾರ ದಿಢೀರ್​ ದಿನಾಂಕವನ್ನು ಬದಲಿಸಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಇದೀಗ ಮಾಧ್ಯಮದವರ ದಿಕ್ಕು ತಪ್ಪಿಸಲು ಈ ರೀತಿ ಹೇಳಲಾಗುತ್ತಿದ್ದು, ವಿವಾಹ ಸರಳವಾಗಿಯೇ ನಡೆಯಲಿದೆ ಎಂದು ಕೂಡ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net