More

    ನಾನೇ ನೋಡಲಾಗದಂತಹ ಸಿನಿಮಾಗಳನ್ನೂ ಮಾಡಿದ್ದೇನೆ: ನೋವಿನ ಸಂಗತಿ ಬಿಚ್ಚಿಟ್ಟ ನಟಿ ಸೊನಾಲಿ ಬೇಂದ್ರೆ!

    ಮುಂಬೈ: ಬಾಲಿವುಡ್​ ನಟಿ ಸೊನಾಲಿ ಬೇಂದ್ರೆ ಅವರು 1990ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಅವರ ಬತ್ತಳಿಕೆಯಲ್ಲಿ ಅನೇಕ ಸಿನಿಮಾಗಳಿದ್ದರೂ, ಆರಂಭಿಕ ವರ್ಷಗಳಲ್ಲಿ ಹೆಚ್ಚು ಪ್ರಭಾವಶಾಲಿ ಪಾತ್ರಗಳಲ್ಲಿ ಸೊನಾಲಿ ಕಾಣಿಸಿಕೊಂಡಿರಲಿಲ್ಲ. ನೀವೇಕೆ ಹೆಚ್ಚಾಗಿ ಸಾಧಾರಣ ಸಿನಿಮಾಗಳಲ್ಲಿ ಕಾಣಸಿಕೊಂಡಿರಿ ಎಂಬ ಪ್ರಶ್ನೆಯನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕೇಳಲಾಯಿತು. ಅದಕ್ಕೆ ಸೊನಾಲಿ ಅವರು ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.

    ಸೊನಾಲಿ ಅವರು ಬಾಲಿವುಡ್​ನಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಹಲವಾರು ಟಿವಿ ಶೋಗಳಲ್ಲಿ ಅತಿಥಿ ಮತ್ತು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರೂ ಸಿನಿಮಾಗಳಿಂದ ದೂರ ಉಳಿದಿದ್ದರು. ಇದೀಗ ದಿ ಬ್ರೋಕನ್ ನ್ಯೂಸ್ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಈ ಸರಣಿಯು ಜೂನ್ 10 ರಿಂದ ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

    ವೆಬ್​ ಸರಣಿಯ ಪ್ರಚಾರದ ಭಾಗವಾಗಿ ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಸೊನಾಲಿ ಕಾಣಿಸಿಕೊಂಡಿದ್ದರು. ಈ ವೇಳೆ ಮನಬಿಚ್ಚಿ ಮಾತನಾಡಿದ ಸೊನಾಲಿ, ಒಂದಾನೊಂದು ಕಾಲದಲ್ಲಿ ನನ್ನ ವೃತ್ತಿ ಜೀವನ ಕುಸಿದಿದ್ದಾಗ ಮತ್ತು ಕ್ಯಾನ್ಸರ್ ಮೊದಲ ಹಂತದಲ್ಲಿದ್ದಾಗ ನನಗೆ ತುಂಬಾ ಹಣ ಬೇಕಿತ್ತು. ಹಣದ ಅವಶ್ಯಕತೆ ಇತ್ತು. ಬಾಡಿಗೆ ಪಾವತಿಸಬೇಕಾಗಿತ್ತು. ಪಾವತಿಸಲು ಬೇಕಾದ ಸಾಕಷ್ಟು ಬಿಲ್​ಗಳಿದ್ದವು. ನನ್ನ ಕುಟುಂಬವು ಕೂಡ ತುಂಬಾ ಸಂಕಷ್ಟದ ಸ್ಥಿತಿಯಲ್ಲಿತ್ತು. ಅಂತಹ ಸಮಯದಲ್ಲಿ ಹಣವೇ ಮುಖ್ಯ ಎಂದು ಫಿಕ್ಸ್ ಆಗಿದ್ದೆ. ಯಾವ ಪಾತ್ರಗಳು ಬಂದವೋ ಅದನ್ನೇ ಮಾಡಿದ್ದೇನೆ. ಹೀಗಾಗಿ ಸಾಧಾರಣ ಸಿನಿಮಾಗಳನ್ನು ನಾನು ಒಪ್ಪಿಕೊಂಡೆ ಎಂದಿದ್ದಾರೆ.

    ಆ ಸಮಯದಲ್ಲಿನ ತನ್ನ ಆಲೋಚನಾ ಪ್ರಕ್ರಿಯೆ ಹೇಗಿತ್ತು ಎಂಬುದನ್ನು ಇದೇ ಸಂದರ್ಭದಲ್ಲಿ ಸೊನಾಲಿ ನೆನಪಿಸಿಕೊಂಡರು. ಇಂತಹ ಪಾತ್ರಗಳನ್ನು ನಾನೇಕೆ ಮಾಡುತ್ತಿದ್ದೇನೆ ಎಂದು ಆಶ್ಚರ್ಯಪಟ್ಟುಕೊಂಡರು, ಸಂಬಳದ ಬಗ್ಗೆ ಯೋಚಿಸುವಾಗ ತಕ್ಷಣವೇ ನಾನು ವಿಚಲಿತಗೊಳ್ಳುತ್ತಿದೆ. ನಾನೇ ನೋಡದ ನನ್ನ ಬಹಳಷ್ಟು ಚಲನಚಿತ್ರಗಳಿವೆ ಎಂದು ಹೇಳಿಕೊಂಡರು. ಇದಲ್ಲದೆ, ಇಂಡಸ್ಟ್ರಿಯಲ್ಲಿ ತನಗೆ ಗಾಡ್‌ಫಾದರ್‌ ಇರಲಿಲ್ಲ ಮತ್ತು ತನಗೆ ಎಂದೂ ಗಾಡ್‌ಫಾದರ್‌ ಬೇಕಾಗಿಲ್ಲ ಎಂದು ಸೋನಾಲಿ ತಿಳಿಸಿದರು.

    ಅಂದಹಾಗೆ ಸೊನಾಲಿ ಅವರು ಕನ್ನಡದಲ್ಲೂ ನಟಿಸಿದ್ದಾರೆ. ಶಿವರಾಜ್​ಕುಮಾರ್​ ಮತ್ತು ಉಪೇಂದ್ರ ಅಭಿನಯದ ಪ್ರೀತ್ಸೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. (ಏಜೆನ್ಸೀಸ್​)

    ಅದು ಹೇಗೆ ಆಗ್ತಾಳೆ ನೋಡ್ತೀನಿ… ತನ್ನನ್ನು ತಾನೇ ಮದ್ವೆ ಆಗುವುದಾಗಿ ಹೇಳಿದ ಯುವತಿಗೆ ಎದುರಾಯ್ತು ಸಂಕಷ್ಟ!

    ತುಮಕೂರು ಜಿಲ್ಲಾ BJP ಮುಖಂಡನ ಕೊಲೆಗೆ ಯತ್ನ: ಇಬ್ಬರು ಇಂಜಿನಿಯರ್​ ಸಸ್ಪೆಂಡ್​, ತಲೆಮರೆಸಿಕೊಂಡವನಿಗಾಗಿ ಶೋಧ

    ಹೈದರಾಬಾದ್​ನಲ್ಲಿ MLAಗೆ ಸೇರಿದ ಕಾರಿನೊಳಗೆ ಅಪ್ರಾಪ್ತೆ ಮೇಲೆ ಗ್ಯಾಂಗ್​ರೇಪ್: ಗೃಹಸಚಿವರ ಮೊಮ್ಮಗನ ವಿರುದ್ಧವೂ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts