ತುಮಕೂರು ಜಿಲ್ಲಾ BJP ಮುಖಂಡನ ಕೊಲೆಗೆ ಯತ್ನ: ಇಬ್ಬರು ಇಂಜಿನಿಯರ್​ ಸಸ್ಪೆಂಡ್​, ತಲೆಮರೆಸಿಕೊಂಡವನಿಗಾಗಿ ಶೋಧ

tumkur bjp
Published on

ತುಮಕೂರು: ಜಿಲ್ಲಾ ಬಿಜೆಪಿ ಮುಖಂಡರೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನ ಪ್ರಕರಣ ಸಂಬಂಧ ಲೋಕೋಪಯೋಗಿ ಇಲಾಖೆಯ ಇಬ್ಬರು ಇಂಜಿನಿಯರ್​ಗಳನ್ನು ಕೆಲಸದಿಂದ ಅಮಾನುತು ಮಾಡಲಾಗಿದೆ.

ತುಮಕೂರು ಲೋಕೋಪಯೋಗಿ ವೃತ್ತದ ಸಹಾಯಕ ಇಂಜಿನಿಯರ್ ಶಂಭುಕುಮಾರ್ ಮತ್ತು ಬೆಂಗಳೂರು ಕೆಆರ್ ವೃತ್ತದ ಲೋಕೋಪಯೋಗಿ ಇಲಾಖೆ ಪಿಆರ್​ಎಎಂಸಿ ವಿಭಾಗದ ಇಂಜಿನಿಯರ್ ಎಂ. ಅಶ್ವಿನಿ ಅವರನ್ನು ಅಮಾನತು ಮಾಡಲಾಗಿದೆ.

ತುಮಕೂರು ಬಿಜೆಪಿ ಜಿಲ್ಲಾ ಘಟಕದ ಎಸ್​ಸಿ ಮೋರ್ಚಾ ಅಧ್ಯಕ್ಷ ಓಂಕಾರೇಶ್ವರ್ ಅವರ ಮೇಲೆ ಕಾರು ಹರಿಸಿ ಕೊಲೆ ಮಾಡಲು ಶಂಭುಕುಮಾರ್, ಅಶ್ವಿನಿ ಮತ್ತು ಮತ್ತೊಬ್ಬ ಮಹಿಳೆ ಯತ್ನಿಸಿದ್ದರು ಎಂದು ಏಪ್ರಿಲ್ 12ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಶ್ವಿನಿಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಶಂಭುಕುಮಾರ್ ತಲೆಮರೆಸಿಕೊಂಡಿದ್ದಾನೆ. ಈತನಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಜಯಲಕ್ಷ್ಮೀ ಅವರು ಇಂಜಿನಿಯರ್​ಗಳಾದ ಶಂಭುಕುಮಾರ್ ಮತ್ತು ಅಶ್ವಿನಿ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net