ಮುಂಬೈ: ಬಾಲಿವುಡ್ ಸೆಲಿಬ್ರಿಟಿಗಳು ಯಾವಾಗಲೂ ಪಾಪರಾಜಿಗಳಿಗೆ ಸಂತೋಷದಿಂದ ಪೋಸ್ ಕೊಡುತ್ತಾರೆ. ಆದರೆ ಅವರನ್ನು ನಿರಂತರವಾಗಿ ಅನುಸರಿಸುತ್ತಿರುವಾಗ ಅವರು ಕೆಲವೊಮ್ಮೆ ಕಿರಿಕಿರಿಯಾಗುತ್ತದೆ. ಅಂತಹ ಸಮಯದಲ್ಲಿ ಅವರು ಆಕ್ರೋಶ ಹೊರಹಾಕುತ್ತಾರೆ. ಸದ್ಯ ನಟಿ ಸೋನಾಕ್ಷಿ ಸಿನ್ಹಾ(Sonakshi Sinha) ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿದೆ.
ಇತ್ತೀಚೆಗೆ ನಟಿ ಸೋನಾಕ್ಷಿ ಸಿನ್ಹಾ ತನ್ನ ಪತಿ ಜಹೀರ್ ಇಕ್ಬಾಲ್ ಅವರೊಂದಿಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಕ್ಷಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ಫೋಟೋಗಾಗಿ ಪಾಪರಾಜಿಗಳು ಆಕೆಯನ್ನು ಹಿಂಬಾಲಿಸಿದ್ದಾರೆ. ಬಳಿಕ ಕೋಪಗೊಂಡ ಸೋನಾಕ್ಷಿ ಅವಳ ಕೈಗಳನ್ನು ಮಡಚಿ ತನ್ನ ಫೋಟೋಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಆದರೂ ಆಕೆಯನ್ನು ಹಿಂಬಾಲಿಸುವುದನ್ನು ಮುಂದುವರಿಸಿದಾಗ ಕೋಪಗೊಂಡು ಒಂದೆಡೆ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಬಳಿಕ ಸಾಕು ಈಗ ಇಲ್ಲಿಂದ ದಯವಿಟ್ಟು ಹೋಗಿ ಎಂದು ತಾಳ್ಮೆಕಳೆದುಕೊಂಡು ಹೇಳಿದ್ದಾರೆ.
ನಟಿ ಸೋನಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತನ್ನ ಪತಿ ಜಹೀರ್ ಇಕ್ಬಾಲ್ ಅವರೊಂದಿಗಿನ ಕಳೆದ ರಜೆಯ ಕೆಲವು ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದರು. ಜತೆಗೆ ನಾವು 30ನೇ ಡಿಸೆಂಬರ್ 2022ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. 2 ವರ್ಷಗಳನ್ನು ಪೂರೈಸಿದ ಸಂಭ್ರದಲ್ಲಿ ನಾವು ವಿಮಾನದಲ್ಲಿ ಹಾರುವ ಮೂಲಕ ಆಚರಿಸಲು ನಿರ್ಧರಿಸಿದ್ದೇವೆ! ಎಂದು ಬರೆದಿದ್ದರು. ಜತೆಗೆ 2024ರ ಅತ್ಯುತ್ತಮ ವರ್ಷಕ್ಕೆ ವಿದಾಯ ಹೇಳುತ್ತಿದ್ದೇನೆ, 2025 ನಮಗೆ ಏನನ್ನು ಕಾಯ್ದಿರಿಸಿದೆ ಎಂದು ನೋಡಲು ಕಾಯಲು ಸಾಧ್ಯವಿಲ್ಲ!! ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ವಿಶ್ ಮಾಡಿದ್ದರು.
ಸೋನಾಕ್ಷಿ ಸಿನ್ಹಾ ಕೊನೆಯದಾಗಿ ರಿತೇಶ್ ದೇಶ್ಮುಖ್ ಮತ್ತು ಸಾಕಿಬ್ ಸಲೀಮ್ ಅವರೊಂದಿಗೆ ‘ಕಾಕುಡ’ದಲ್ಲಿ ಕಾಣಿಸಿಕೊಂಡರು. ಅವರ ಮುಂದಿನ ಪ್ರಾಜೆಕ್ಟ್ ‘ನಿಕಿತಾ ರಾಯ್ ಅಂಡ್ ದಿ ಬುಕ್ ಆಫ್ ಡಾರ್ಕ್ನೆಸ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಪರೇಶ್ ರಾವಲ್ ಮತ್ತು ಸುಹೇಲ್ ನಯ್ಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್)