

ಮುಂಬೈ: ನಟಿ ರಾಧಿಕಾ ಆಪ್ಟೆ(Radhika Apte) ನವೆಂಬರ್ ತಿಂಗಳಿನಲ್ಲಿ ಮಗಳ ತಾಯಿಯಾಗಿದ್ದು ಈ ಸಂತಸವನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಮಾಡಿಸಿರುವ ಫೋಟೋಶೂಟ್ ಆಕೆಯ ತಾಯ್ತನದ ಹಂತವನ್ನು ತೋರಿಸುತ್ತದೆ. ರಾಧಿಕಾ ಆಪ್ಟೆ ತಮ್ಮ ಗರ್ಭಧಾರಣೆ ಮತ್ತು ಅದರ ನಂತರದ ಹಂತಗಳ ಬಗ್ಗೆ ಮಾತನಾಡಿದ್ದು, ಗರ್ಭಾವಸ್ಥೆಯಲ್ಲಿ ಮತ್ತು ನಂತರ ಅವರು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.
ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಾಧಿಕಾ ಆಪ್ಟೆ, ತನ್ನ ಪತಿ ಬೆನೆಡಿಕ್ಟ್ ಟೇಲರ್ (ಸಂಗೀತಗಾರ) ಹೆಣ್ಣು ಮಗುವಿನ ಜನನದಿಂದ ತುಂಬಾ ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ ತನ್ನ ನಿದ್ರೆಯು ಹೇಗೆ ಪ್ರಭಾವಿತವಾಗಿದೆ ಹಾಗೂ ತನ್ನ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳಾದವು. ದೇಹವು ಊದಿಕೊಂಡಿತು. ನಿಜ ಹೇಳಬೇಕೆಂದರೆ ಗರ್ಭಾವಸ್ಥೆಯಲ್ಲಿ ಮತ್ತು ನಂತರ ನನ್ನನ್ನು ನಾನು ಒಪ್ಪಿಕೊಳ್ಳಲು ಸಾಕಷ್ಟು ಕಷ್ಟಪಡಬೇಕಾಗಿತ್ತು ಎಂದಿದ್ದಾರೆ.
ನನ್ನ ತೂಕ ಇಷ್ಟು ಹೆಚ್ಚಾಗುವುದನ್ನು ನಾನು ನೋಡಿರಲಿಲ್ಲ, ನನ್ನ ದೇಹವು ಊದಿಕೊಂಡಿತು. ನನ್ನ ಹೊಟ್ಟೆ ಮತ್ತು ಕೆಳ ಬೆನ್ನಿನಲ್ಲಿ ನನಗೆ ತೀವ್ರವಾದ ನೋವು ಇತ್ತು. ಈ ಎಲ್ಲಾ ಸಂಗತಿಗಳಿಂದಾಗಿ ಎಲ್ಲದರ ಬಗ್ಗೆ ನನ್ನ ದೃಷ್ಟಿಕೋನ ಬದಲಾಗಿದೆ. ಮಗಳು ಹುಟ್ಟಿದ ಎರಡು ವಾರಗಳ ನಂತರವೂ ನನ್ನ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತಲೇ ಇತ್ತು ಎಂದು ರಾಧಿಕಾ ತಿಳಿಸಿದರು.
ನವೆಂಬರ್ ತಿಂಗಳಿನಲ್ಲಿಯೇ ರಾಧಿಕಾ ಆಪ್ಟೆ ತಾಯಿಯಾಗಿದ್ದಾರೆ. ಆದರೆ ಅವರ ಮದುವೆಯಾಗಿ ಸುಮಾರು 12 ವರ್ಷಗಳಾಗಿವೆ. ರಾಧಿಕಾ 2012ರಲ್ಲಿ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅವರನ್ನು ವಿವಾಹವಾದರು. ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಈಗ ಅವರ ಜೀವನದಲ್ಲಿ ಪುಟ್ಟ ದೇವತೆ ಬಂದಿದ್ದು, ಇಬ್ಬರೂ ತುಂಬಾ ಸಂತೋಷವಾಗಿದ್ದಾರೆ. ರಾಧಿಕಾ ಆಪ್ಟೆ ಮುಂದಿನ ವರ್ಷ ಇಂಗ್ಲಿಷ್ ಸಿನಿಮಾ 'ಲಾಸ್ಟ್ ಡೇಸ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಅವರು 'ಸಿಸ್ಟರ್ ಮಿಡ್ನೈಟ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್)